ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75 ರ ಮಾಣಿ ಸಮೀಪ ಗುರುವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದು,ಬಸ್ಸು ಸಂಪೂರ್ಣ ಬೆಂಕಿಗಾಹುತಾಗಿದೆ. ಇಲ್ಲಿನ ಬೊಳ್ಳುಕಲ್ಲು ಎಂಬಲ್ಲಿ ನಡೆದಿದ್ದು, ಖಾಸಗಿ ಬಸ್ಸು ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದು, ಬೈಕ್ ಮಾಣಿ ಕಡೆಯಿಂದ ಬರುತ್ತಿತ್ತು ಎನ್ನಲಾಗಿದೆ. ಘಟನೆಯ ತೀವ್ರತೆಗೆ ಬೈಕ್ ಸವಾರ ಉಪ್ಪಿನಂಗಡಿ ಸಮೀಪದ ಹಳೆನೇರಂಕಿ ನಿವಾಸಿ ಚೇತನ್ ಗೌಡ ಗಂಭೀರ ಗಾಯಗೊಂಡಿದ್ದು, ಚಿಂತಾಜನಕ್ಥತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

6 (1)

2 (1)

2 (2)

4 (2)

IMG-20150917-WA0015

IMG-20150917-WA0017

IMG-20150917-WA0020

IMG-20150917-WA0021

IMG-20150917-WA0023

chethan

ಓವರ್ ಸ್ಪೀಡ್ ಹಾಗೂ ಓವರ್ ಟೇಕ್ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್ ಬಸ್ಸಿನ ಅಡಿಗೆ ಸಲುಕಿಕೊಂಡಿದ್ದು, ಬಸ್ಸಿನ ವೇಗದ ತೀವ್ರತೆಗೆ ಬೈಕ್ನ ಪೆಂಟ್ರೋಲ್ ಟಾಂಕಿ ಡಾಮರು ರಸ್ತೆಗೆ ತಾಗಿದ್ದು, ಅದರ ತೀವ್ರತೆಯಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಅಡಿ ಭಾಗದಿಂದ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಇಳಿದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಘಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ, ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರಯ್ಯ ಭೇಟಿ ನೀಡಿದ್ದಾರೆ. ಘಟನೆಯಿಂದಾಗಿ ಕೆಲ ತಾಸುಗಳ ಕಾಲಹೆದ್ದಾರಿಯಲ್ಲಿ ವಾಹನಸಂಚಾರ ಅಸ್ತವ್ಯಸ್ತಗೊಂಡಿತ್ತು.

ಚಿತ್ರ;ಕಿಶೋರ್ ಪೆರಾಜೆ

 

By suddi9

Leave a Reply

Your email address will not be published. Required fields are marked *