ಬಂಟ್ವಾಳ: ದೇವರ ಆರಾಧನೆಯಿಂದ ಸಮಾಜದ ಸಮಸ್ತ ವಿಘ್ನಗಳು ದೂರವಾಗುತ್ತದೆ, ಸಮುಷ್ಠಿಯಲ್ಲಿ ಶಕ್ತಿಯಿದೆ ಹಾಗಾಗೀ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಗಳಲ್ಲಿ ಸಾಮೂಹಿಕ ಸಂಕಲ್ಪ ಮಾಡಿದಾಗ ಭಕ್ತರ ಬೇಡಿಕೆಗಳು ಈಡೇರುತ್ತದೆ ಎಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದರು. ಅವರು ಸಜೀಪ ಮೂಡ ಗ್ರಾಮದ ಈಶ್ವರ ಮಂಗಲ ಶ್ರೀಸದಾಶಿವ ದೇವಸ್ಥಾನ ಇದರ ಜೀರ್ಣೋದ್ದಾರದ ಅಂಗವಾಗಿ ಸಾಮೂಹಿಕ 108 ಕಾಯಿ ಗಣಹೋಮ ಮತ್ತು ರೂ 60ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಣಗೊಳ್ಳುತ್ತಿರುವ ಸುತ್ತುಪೌಳಿ ಶಿಲಾನ್ಯಾಸದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಭದ್ರವಾಗಿರಬೇಕಾದರೆ, ಗ್ರಾಮದ ದೇವಸ್ಥಾನ ದೈವಸ್ಥಾನಗಳು ಭದ್ರವಾಗಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜಾ, ಉದ್ಯಮಿ ಗೋಪಾಲಕೃಷ್ಣ ಆಚಾರ್ಯ, ಸಮಿತಿ ಪ್ರಮುಖರಾದ ಮಹಾಬಲ ಕೊಟ್ಟಾರಿ, ಸದಾನಂದ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಜಯಶಂಕರ ಬಾಸ್ರಿಂತ್ತಾಯ, ಯೋಗೇಶ್ ಬೆಳ್ಚಡ, ಮಾರಪ್ಪ ಕೊಟ್ಟಾರಿ, ಚೆನ್ನಯ್ಯ ಪೂಜಾರಿ, ಶಾಂತಿರಾಜ್ ರೈ, ವೆಂಕಟೇಶ್ ಭಟ್, ಪ್ರಭಾಕರ ಆಳ್ವ, ವಾಸು ಗಟ್ಟಿ, ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.
ಲೋಕ ಕಲ್ಯಾಣಾರ್ಥವಾಗಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಧಿಪೂರ್ವಕವಾಗಿ 108 ಕಾಯಿ ಗಣಯಾಗ ಸಂಪನ್ನಗೊಂಡಿತು. ಎಂ. ಸುಬ್ರಹ್ಮಣ್ಯ ಭಟ್, ಕೃಷ್ಣಮೂರ್ತಿ ಕಾರಂತ, ರಾಘವೇಂದ್ರ ಭಟ್, ಶಂಕರಗಣಪತಿ ಭಟ್,ಶಂಕರನಾರಾಯಣ ಭಟ್ ಗಣಯಾಗದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು

