ಮುಂಬಯಿ: ಭಾರತ್ ಕೋ.ಅಪರೇಟಿವ್ ಬ್ಯಾಂಕ್ ನಿಯಮಿತ ತನ್ನ 72ನೇ ಶಾಖೆಯನ್ನು ಸೆ.15ರಂದು ಮಂಗಳವಾರ ಬೆಳಿಗ್ಗೆ ಕಾಂಜೂಮಾರ್ಗ ಪೂರ್ವದ ರೈಲ್ವೇ ಸ್ಟೇಷನ್ನ ಹತ್ತಿರದ ಶ್ರೀ ಕುಚ್ಚಿ ಬ್ರಹ್ಮಕ್ಷತ್ರೀಯ ಪಂಚಾಯತ್ ಕಟ್ಟಡದಲ್ಲಿ ಶುಭಾರಂಭ ಗೊಂಡಿತು. ಕಾಂಜೂಮಾರ್ಗ ಶ್ರೀ ಅಂಬಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ಅನಂತ್ ಭಟ್ ಆಶೀರ್ವಚಿಸಿದರು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರು ಶಾಖೆಯನ್ನು ಉದ್ಘಾಟಿಸಿದರು.ಉಧ್ಯಮಿ ರಮೇಶ್ ಶೆಟ್ಟಿ ಜ್ಯೋತಿ ಬೆಳಗಿಸಿ ಶಾಖೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಬ್ಯಾಂಕ್ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ನಿರ್ಧೇಶಕ ಜ್ಯೋತಿ ಕೆ.ಸುವರ್ಣ ಲಾಕರ್ ಸೇವೆ, ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಅವರು ಕಂಪ್ಯೂಟರೀಕೃತ ಬ್ಯಾಂಕಿಂಗ್ ಸೇವೆಯನ್ನು ಸ್ಥಾನಿಯ ಜನತೆಗೆ ಸಮರ್ಪಿಸಿದರು.

ಸ್ಥಾನೀಯ ಸಮಾಜ ಸೇವಕಿ ಶೋಭಾ ಗಣಪತಿ ಶೆಣೈ ಮಾತನಾಡಿ ನಮ್ಮೂರ ಹೆಸರು ನಾಡಿಗೆನೇ ದೊಡ್ಡದು. ನಮಗೆ ಊರಿನವರು ಎಂದರೆ ಖುಷಿ ಆಗುತ್ತದೆ. ನಮ್ಮವರಲ್ಲಿ ಭಾಷೆ, ಊರಿನ ಬಾಂಧವ್ಯತೆಯಿದ್ದು, ಅದರ ಪರಿಮಳವನ್ನು ಸಂಬಂಧದೊಂದಿಗೆ ಪಸರಿಸಿ ಸೇವೆಗೈಯುವ ದೊಡ್ದತನವಿದೆ. ನಮ್ಮವರ ಸ್ನೇಹತ್ವ ಕಂಡಾಗ ಅನಾಥ ಪ್ರಜ್ಞೆ ಮರೆಯಾಗುತ್ತೆ. ಇವೆಲ್ಲ ಸಾಧನೆಗಳನ್ನು ಅಳೆಯಲು ಮಾಪನವಿಲ್ಲ ಎಂದು ನನ್ನ ಅಭಿಮತವಾಗಿದೆ. ಅಂತೆಯೇ ಭಾರತ್ ಬ್ಯಾಂಕ್ ನಮ್ಮೂರವರ ಬ್ಯಾಂಕ್ ಎನ್ನಲು ತನ್ನತನ ತೋರುತ್ತದೆ. ಗಣೇಶಚತುರ್ಥಿ ಶುಭಾವಸರದಲ್ಲಿ ಸೇವಾರಂಭಿಸಿದ ಬ್ಯಾಂಕ್ನ ಈ ಶಾಖೆ ಶ್ರೀ ವಿನಾಯಕನ ಅನುಗ್ರಹದಿಂದ ಸದಾ ಉನ್ನತಿ ಕಾಣಲಿ ಎಂದು ಮುತ್ತಿನಂತ ನುಡಿಗಳನ್ನಾಡಿ ಕಾರ್ಯಕ್ರಮವನ್ನು ಶೋಭಾಮಯ ಗೊಳಿಸಿದರು.
ಗೌರವ್ವಾನಿತ ಗಣ್ಯರುಗಳಾಗಿ ಬ್ಯಾಂಕ್ನ ಮಾಜಿ ನಿರ್ದೆ ಶಕರುಗಳಾದ ಎನ್.ಎಂ ಸನೀಲ್ ಮತ್ತು ರಾಜ ವಿ. ಸಾಲ್ಯಾನ್, ಚಂದ್ರಶೇಖರ್ ಶೆಟ್ಟಿ, ಅಶೋಕ್ ಶೆಟ್ಟಿ, ಕೆ. ಶ್ರೀನಿವಾಸ್, ಲಕ್ಷ್ಮಣ್ ಕೆ.ಸನೀಲ್, ರತ್ನಾಕರ್ ಶೆಟ್ಟಿ, ರಮೇಶ್ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ವಿಕ್ರೋಲಿ ಸ್ಥಳಿಯ ಕಛೇರಿಯ ಗೌರವ ಕಾರ್ಯಧ್ಯಕ್ಷ ಕೆ.ಎಂ ಮಾಬಿಯಾನ್, ಕಾರ್ಯಧ್ಯಕ್ಷ ರಾಘವ ಕುಂದರ್, ಎಸ್.ಕೆ ಸಾಲ್ಯಾನ್, ಎಂ.ಎನ್ ಕರ್ಕೇರ, ಪಾಂಡುರಂಗ ಜಿ.ಕಾಳೆ ಮತ್ತು ಸ್ಥಳಿಯ ನೂತನ ಗ್ರಾಹಕರು ಉಪಸ್ಥಿತರಿದ್ದು ಪಥಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಕೆ.ಎನ್ ಸುವರ್ಣ, ಜೆ.ಎ.ಕೋಟ್ಯಾನ್, ಯು.ಎಸ್.ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಆರ್.ಡಿ.ಪೂಜಾರಿ, ಕೆ.ಬಿ.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಸಿ.ಟಿ ಸಾಲ್ಯಾನ್ ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕರುಗಳಾದ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ವಿವೇಕ್ ಎಸ್.ಶ್ಯಾನ್ಭಾಗ್, ಸುರೇಶ್ ಎಸ್.ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ವಿದ್ಯಾನಂದ ಎಸ್.ಕರ್ಕೇರಾ, ಪ್ರಭಾಕರ್ ಜಿ.ಸುವರ್ಣ, ವಿಶ್ವನಾಥ್ ಜಿ.ಸುವರ್ಣ, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಪ್ರವೀಣ್ ಸುವರ್ಣ, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ. ಪೂಜಾರಿ, ಗೌರವ ಕಾರ್ಯದರ್ಶಿ ದಿನೇಶ್ ಕೆ.ಸನೀಲ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶೇಖರ ಶಾಂತಿ ಉಳ್ಳೂರು ಮತ್ತು ಸಹ ಪುರೋಹಿತ ಗಂಗಾಧರ ಕಲ್ಲಾಡಿ ಅವರು ವಾಸ್ತುಪೂಜೆ, ಗಣಹೋಮ ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಬ್ಯಾಂಕ್ನ ಸಹಾಯಕ ಪ್ರಬಂಧಕ ಹರೀಶ್ ಸಾಲ್ಯಾನ್ ಮತ್ತು ಶ್ರೀಮತಿ ಭಾರತಿ ಹರೀಶ್ ದಂಪತಿ ಪೂಜಾಧಿಗಳಲ್ಲಿ ಪಾಲ್ಗೊಂಡಿದ್ದರು. ಮಹಾ ಪ್ರಂಬಧಕ ನಿತ್ಯಾನಂದ ಡಿ. ಕೋಟ್ಯಾನ್ ಬ್ಯಾಂಕ್ನ ಸೇವಾ ವೈಖರಿಯನ್ನು ಪ್ರಸ್ತಾಪಿಸುತ್ತಾ ಕಾರ್ಯಕ್ರಮ ನಿರ್ವಹಿಸಿದರು. ಶಾಖೆಯ ಮುಖ್ಯಸ್ಥೆ ವಿದ್ಯಾ ಎ.ಅವಿೂನ್, ಅಧಿಕಾರಿಗಳಾದ ಸಂಗೀತ ಅಂಚನ್, ಮನೀಷ ಸಾಲ್ಯಾನ್, ಜಿತೇಶ್ ಕೋಟ್ಯಾನ್, ಕೇತ್ಕಿ ಅಬ್ಯಾಂಣ್ಕರ್ ಮತ್ತು ಸುರೇಶ್ ವಾಘ್ ಅವರನ್ನು ಜಯ ಸುವರ್ಣರು ಪುಷ್ಫಗುಪ್ಚವನ್ನೀಡಿ ಗೌರವಿಸಿದರು. ಬ್ಯಾಂಕ್ನ ಉಪ ಪ್ರಧಾನ ಪ್ರಬಂಧಕ, ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿ ವಂದಿಸಿದರು.
ಚಿತ್ರ ರೋನ್ಸ್ ಬಂಟ್ವಾಳ್























