ಬಂಟ್ವಾಳ: ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ ಶತಮಾನೋತ್ಸವ ವಾರ್ಷಿಕ ಆಚರಣೆಯ ಪ್ರಯುಕ್ತ ಗ್ರಾಹಕರ ಸಮಾವೇಶವನ್ನು ಬಿ.ಸಿ.ರೋಡಿನ ಉಪೇಂದ್ರ ಸೌದದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಶೇಷಶಯನ ಕಾರಿಂಜ ಕ್ಷೇತ್ರ ಶಿಕ್ಷಣಾಧಿಕಾರಿಯವರು ಕಾರ್ಯಕ್ರಮವನ್ನು ಉದ್ಟಾಟಿಸಿದರು.

ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ ಅಧ್ಯಕ್ಷರಾದ ಶ್ರೀ ಚೇರ್ಕಾಡಿ ಅಶೋಕ್ ಕುಮಾರ್ ಹೆಗ್ಡೆಯವರು ಅಧ್ಯಕ್ಷತೆಯನ್ನು ವಹಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಂಡುರಂಗ ನಾಯಕ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ ರೈ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶೀ ಜೋಯೆಲ್ ಲೋಬೋ, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ.ಬಿ. ರಾಮಚಂದ್ರ ರಾವ್, ಮಹಾಪ್ರಬಂಧಕರು ಶ್ರೀ ಪ್ರಮೋದ್ ಹೆಗ್ಡೆ ಜಿ, ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು..
ಬ್ಯಾಂಕಿನ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಶೆಟ್ಟಿಯವರು ಸ್ವಾಗತಿಸಿ, ಮಹಾಪ್ರಬಂಧಕರಾದ ಶ್ರೀ ಪ್ರಮೋದ್ ಹೆಗ್ಡೆ .ಜಿ ಪ್ರಾಸ್ತಾವಿಕ ಮಾತನಾಡಿ, ಶಾಖಾಧಿಕಾರಿ ಶ್ರೀಮತಿ ಗೀತಾ ಆಚಾರ್ಯ ವರದಿವಾಚಿಸಿದರು, ಸ್ಥಾಪಕಾಧ್ಯಕ್ಷರಾದ ಶಿರಾಲಿ ಸುಬ್ಬರಾವ್‍ರವರು ಭಾವಚಿತ್ರ ಆನಾವರಣಗೊಳಿಸಿದರು, ನಂತರ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ ದೇವಪ್ಪ ನಾಯಕ್‍ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಶರಾವತಿಯವರು ನಿರೂಪಿಸಿ, ಕೃಷ್ಣರಾಜ್ ಶೆಟ್ಟಿಯವರು ವಂದಿಸಿದರು…
