ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸಹಾಯಕ ಹಾಗೂ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ನನ್ನನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಒಡ್ಡಿದಾರೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ ಕುಮಾರ್ ವಿಶ್ವಾಸ್ ಟ್ವಿಟ್ ಮಾಡಿದ್ದಾರೆ

 

ಆಪಾದನೆಯ ಜತೆಗೆ ಅವರು ವಿಡಿಯೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕುಮಾರ್ ವಿಶ್ವಾಸ್‌ಗೆ ಗುಂಡು ಹಾರಿಸುತ್ತೇನೆ ಎಂದು ಹೇಳುತ್ತ ಪ್ರಿಯಾಂಕಾ ಗಾಂಧಿ ಕಾರಿನ ಹಿಂದೆ ಓಡುತ್ತಿದ್ದಾನೆ. ಆದರೆ ಇದನ್ನು ನಿರಾಕರಿಸಿರುವ ಪ್ರಿಯಾಂಕಾ ಆತ ಹಾಗೇ ಹೇಳಿಲ್ಲ ಎಂದು ಹೇಳಿದ್ದಾರಲ್ಲದೇ ಈ ವಿಷಯದಲ್ಲಿ ಚರ್ಚಿಸಲು ವಿಶ್ವಾಸ್‌ರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಥಿ ಲೋಕಸಭಾ ಕ್ಷೇತ್ರದಿಂದ ಆಪ್ ನಾಯಕ ನಾಮಪತ್ರವನ್ನು ಸಲ್ಲಿಸಿದ್ದಾರೆ.ಕವಿ ಪರಿವರ್ತಿತ ರಾಜಕಾರಣಿ ತನ್ನ ಪಕ್ಷದ ಪರವಾಗಿ ಮತದಾರರ ಮನವೊಲಿಸಲು ವಾರಗಳಿಂದ ಅಮೇಥಿಯಲ್ಲಿದ್ದಾರೆ. ರಾಹುಲ್ ಗಾಂಧಿ ಹೊರತುಪಡಿಸಿ ಬಿಜೆಪಿಯಿಂದ ಸ್ಮೃತಿ ಇರಾನಿ ಕೂಡ ಕುಮಾರ್ ವಿಶ್ವಾಸ್ ವಿರುದ್ಧ ಕಣದಲ್ಲಿದ್ದಾರೆ.

By suddi9

Leave a Reply

Your email address will not be published. Required fields are marked *