ಮುಂಬಯಿ, ಸೆ.13: ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯಲ್ಲಿನ ಸೆಕ್ರೇಡ್ ಹಾರ್ಟ್ ಇಗರ್ಜಿಯ ಕೆನರಾ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಇಂದಿಲ್ಲಿ ಭಾನುವಾರ ವಾರ್ಷಿಕ ಸಂಭ್ರಮದಂತೆ ಮಾತೆ ಮರಿಯಮ್ಮರ ಜನ್ಮೋತ್ಸವ `ಮೊಂತಿ ಹಬ್ಬ-2015’ವನ್ನು ತೆನೆಹಬ್ಬದೊಂದಿಗೆ ವಿಜೃಂಭನೆಯಿಂದ ಆಚರಿಸಿತು.

ಇಗರ್ಜಿಯ ಗ್ರೊಟ್ಟೊ ಮುಂಭಾಗದಲ್ಲಿ ನೆರೆದ ಭಕ್ತಾಧಿಗಳನ್ನೊಳಗೊಂಡು ಆತ್ಮದರ್ಶನದ ನಿರ್ದೇಶಕ ರೆ| ಫಾ| ಹೆನ್ರಿ ಡಿ’ಸೋಜಾ ಅವರು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮಾತೆಯನ್ನು ಆರಾಧಿಸಿ ಮೋಂತಿ ಉತ್ಸವ ನಡೆಸಿದರು. ಅಂತೆಯೇ ಪ್ರಾರ್ಥನೆಗಳನ್ನು ನೆರವೇರಿಸಿ ಬತ್ತದ ತೆನೆಗಳನ್ನು ಆಶೀರ್ವದಿಸಿ ಕೃಷಿ ಪ್ರಧಾನ ತೆನೆಹಬ್ಬಕ್ಕೆ ಚಾಲನೆಯನ್ನಿತ್ತು ಅನುಗ್ರಹಿಸಿದರು. ಬಳಿಕ ಪುಟಾಣಿಗಳು ಮತ್ತು ಮೇರಿಮಾತೆ ಭಕ್ತರು ಅಲಂಕರಿತ ಪ್ರತಿಮೆಗೆ ಪುಷ್ಫಾರ್ಚನೆಗೈದು ಮರಿಯಮ್ಮರ ಗೌರವಗೀತೆಗಳೊಂದಿಗೆ ಮಾತೆಯನ್ನು ನಮಿಸಿದರು.

ಸೆಕ್ರೇಡ್ ಹಾರ್ಟ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಲಾರೇನ್ಸ್ ಕೊರೆಯಾ ಸಂಭ್ರಮಿಕ ಕೃತಜ್ಞಾತಾ ಪೂಜೆ ನೇರವೇರಿಸಿ ಸದ್ಭಕ್ತರನ್ನು ಅನುಗ್ರಹಿಸಿದರು. ರೆ| ಫಾ| ಜೊಸ್ಸಿ ಫೆರ್ನಾಂಡಿಸ್ ಪ್ರಸಂಗವನ್ನಿತ್ತರು. ರೆ| ಫಾ| ಸಿರಿಲ್ ಡಿ’ಸೋಜಾ, ಫಾ| ಎಸ್.ಚಿನ್ನಪ್ಪ, ಫಾ| ನಿರಾನ್ ವೇಗಸ್, ಫಾ| ಇನ್ನೊಸೆಂಟ್ ಫೆರ್ನಾಂಡಿಸ್ ಪೂಜೆಯಲ್ಲಿ ಸಹಭಾಗಿಗಳಾಗಿ ಆಶೀರ್ವದಿಸಿದ ತೆನೆಗಳನ್ನು ನೆರೆದ ಭಕ್ತರಿಗೆ ವಿತರಿಸಿ ಹರಸಿದರು.

Canara Welfare Assn-Nativity-20


Canara Welfare Assn-Nativity-13

Canara Welfare Assn-Nativity-11

Canara Welfare Assn-Nativity-14

Canara Welfare Assn-Nativity-10

Canara Welfare Assn-Nativity-9

Canara Welfare Assn-Nativity-4

Canara Welfare Assn-Nativity-3

Canara Welfare Assn-Nativity-1

Canara Welfare Assn-Nativity-26

Canara Welfare Assn-Nativity-18

Canara Welfare Assn-Nativity-16

Canara Welfare Assn-Nativity-25

 

ನಂತರ ಸೆಕ್ರೇಡ್ ಹಾರ್ಟ್ ಇಗರ್ಜಿಯ ಸಭಾಗೃಹದಲ್ಲಿ ಕೆನರಾ ವೆಲ್ಫೇರ್ ಅಸೋಸಿಯೇಶನ್ ಪದಾಧಿಕಾರಿಗಳು ತನ್ನ ವಾರ್ಷಿಕ ಧಾರ್ಮಿಕ ಹಾಗೂ ತೆನೆಹಬ್ಬ ಸಂಭ್ರಮಿಸಿದ್ದು, ಫಾ| ಲಾರೇನ್ಸ್ ಕೊರೆಯಾ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಅತಿಥಿಗಳಾಗಿ ರೆ| ಫಾ| ಜೊಸ್ಸಿ ಫೆರ್ನಾಂ ಡಿಸ್, ರೆ| ಫಾ| ಸಿರಿಲ್ ಡಿ’ಸೋಜಾ, ಫಾ| ಎಸ್.ಚಿನ್ನಪ್ಪ, ಫಾ| ನಿರಾನ್ ವೇಗಸ್, ಫಾ| ಇನ್ನೊಸೆಂಟ್ ಫೆರ್ನಾಂಡಿಸ್, ಸಿ| ರಂಜನ, ಸಿ| ಫಾತಿಮಾ, ಅಸೋಸಿಯೇಶನ್ನ ಅಧ್ಯಕ್ಷ ಟೋನಿ ಫ್ರಾನ್ಸಿಸ್ ಡಿ’ಅಲ್ಮೇಡಾ, ಉಪಾಧ್ಯಕ್ಷ ಗ್ಲೆನ್ನ್ ರೆಬೆಲ್ಲೋ, ಕೋಶಾಧಿಕಾರಿ ಪಾಯಾಸ್ ಫೆರ್ನಾಂಡಿಸ್, ಮತ್ತು ಕಾರ್ಯಕ್ರಮದ ಪ್ರಮುಖ ಸಂಘಟಕಿ ಶ್ರೀಮತಿ ಜ್ಯೂಲಿ ಡಿ’ಅಲ್ಮೇಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಗುರುಗಳು ಮತ್ತು ಕಾರ್ಯಕ್ರಮದ ಪೋಷಕರು ಮತ್ತು ಹಿತೈಷಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗ್ಯಾನ ಆಶ್ರಮ ಸಮೂಹದ ಮಕ್ಕಳು ವಿವಿಧ ನೃತ್ಯಗಳನ್ನು ಪ್ರದರ್ಶಿಸಿದರು. ಕೊನೆಯಲ್ಲಿ ತೆನೆಹಬ್ಬವನ್ನು ಸಂಪ್ರಾದಾಯಿಕ ಅಡುಗೆಯಂತೆ ಶುದ್ಧ ಶಾಖಾಹಾರಿ ಭೋಜನ ದೊಂದಿಗೆ ಆಚರಿಸಲಾಗಿದ್ದು, ಫಾ| ಸಿರಿಲ್ ಡಿ’ಸೋಜಾ ಆಶೀರ್ವದಿಸಿದರು. ಅಧ್ಯಕ್ಷ ಟೋನಿ ಫ್ರಾನ್ಸಿಸ್ ಡಿ’ಅಲ್ಮೇಡಾ ಸ್ವಾಗತಿಸಿದರು. ಕ್ಲೆಮೆಂಟ್ ಲೋಬೊ ನಕ್ರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲೆನ್ನಿ ಫೆರ್ನಾಂಡಿಸ್ ಅಭಾರ ವಂದಿಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *