ಉಳ್ಳವರ ಸೊತ್ತಾಗಿದ್ದ ಶಿಕ್ಷಣ ಇಂದು ವಿಸ್ತ್ರತಗೊಂಡು ಸಮಾಜದ ದುರ್ಬಲ ಮತ್ತು ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ವಿಸ್ತರಣೆಯಾಗುತ್ತಿದೆ.ಸಾಮಾಜಿಕ ನ್ಯಾಯದ ಪರಿಭಾವನೆಯ ಮೂಲಕ ಸಬಲೀಕರಣ ಸಾಧ್ಯ. ಉದ್ಯೋಗವಕಾಶಗಳನ್ನು ಗಿಟ್ಟಿಸಿಕೊಳ್ಳಲು ಅರ್ಹತೆಯೊಂದೇ ಮಾನದಂಡ ಸ್ವಸಾಮಥ್ರ್ಯ , ಪರಿಶ್ರಮ, ಬದ್ಧತೆಯಿಂದ ವ್ಯಕ್ತಿಯೋರ್ವಉನ್ನತಮಟ್ಟಕ್ಕೇರಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವದಅರಿವನ್ನು ವಿಸ್ತರಿಸಲು ಸಾಧ್ಯ. ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಮೂಲಕ ನಾಯಕತ್ವ, ಸಾಮರಸ್ಯ, ಸೌಹಾರ್ದತೆ ಸಾಧ್ಯ ಎಂದು ಕರ್ನಾಟಕ ಸರಕಾರದಅರಣ್ಯ ಪರಿಸರ, ಜೀವಿಶಾಸ್ತ್ರಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ. ಬಿ.ರಮಾನಾಥರೈಯವರು ಹೇಳಿದರು.ಅವರು ವಾಮದಪದವು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2015-16 ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಮತ್ತು ನೂತನಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.


ಸರಕಾರಿ ಪ್ರಥಮದರ್ಜೆ ಕಾಲೇಜು ವಿಟ್ಲಇಲ್ಲಿನ ಪ್ರಾಂಶುಪಾಲರುಡಾ.ಶಂಕರ ಪಾಟಾಳಿಯವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾಗ್ರಾಮೀಣ ಪರಿಸರ ಈ ಕಾಲೇಜು ಶೈಕ್ಷಣಿಕ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ತನ್ನದೇಆದಚಾಪನ್ನು ಹೊತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಇತಿಹಾಸವಿಭಾಗದ ಮುಖ್ಯಸ್ಥರಾದಪ್ರೊ. ಸತೀಶ್ಗಟ್ಟಿಯವರು ಪ್ರತಿಜ್ಷಾವಿಧಿ ಬೋಧಿಸಿದರು ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಸಲಹೆಗಾರ ಪ್ರೊ. ಹರಿಪ್ರಸಾದ್ ಬಿ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿಕಾಲೇಜಿನ ವಾರ್ಷಿಕ ಸಂಚಿಕೆ ಹೊಂಬೆಳಕು, ಮಾನವಿಕ ಸಂಘದ ವತಿಯಿಂದ ವಿದ್ಯಾರ್ಥಿಗಳು ಮಂಡಿಸಿದ ಕಿರುಪ್ರಬಂಧಅಡಿಕೆ ಕೃಷಿ ಸಮೃದ್ಧಿಯೋ?ನಿಷೇಧವೋ?ಇದನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸೈಯದ್ಗೌಸ್ರವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು.ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕೆ.ಪಿ.ಸುಬ್ರಹ್ಮಣ್ಯ ಭಟ್, ಚೆನೈತ್ತೋಡಿಗ್ರಾಮ ಪಂಚಾಯತ್ಅಧ್ಯಕ್ಷಯತೀಶ್ ಶೆಟ್ಟಿ, ಲೊಕೋಪಯೋಗಿಇಲಾಖೆಯಕಾರ್ಯನಿರ್ವವಹಕ ಇಂಜಿನಿಯರ್ ಶ್ರೀ.ರವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜುಅಭಿವೃದ್ಧಿ ಸಮಿತಿಯಉಪಾಧ್ಯಕ್ಷರು, ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕು.ಸವಿತಾ ಬಳಗದವರು ಪ್ರಾರ್ಥಿಸಿದರು ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯಅಧ್ಯಕ್ಷರಾದ ರಶ್ವಿತ್ರವರು ಸ್ವಾಗತಿಸಿದರು.ಕಾರ್ಯದರ್ಶಿ ನಾಗೇಶ್ ವಂದಿಸಿದರು, ವಾಣಿಜ್ಯ ಶಾಸ್ತ್ರದಉಪನ್ಯಾಸಕರಾದ ಸುರೇಶ್ ವಿಟ್ಲಕಾರ್ಯಕ್ರಮ ನಿರೂಪಿಸಿದರು.

