ಬಂಟ್ವಾಳ : ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಐಇಸಿ ಪಾರ್ಕ್ (ಇನ್ಫಾರ್ಮೆ ಶನ್, ಎಜುಕೇಶನ್, ಕಮ್ಯುನಿಕೇಶನ್ ಪಾರ್ಕ್ )ನ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ನೂತನ ಪಾರ್ಕ್ ನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಕಳೆದ 18 ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರದ ಸಮಗ್ರ ಅಭಿವೃದ್ಧಿಯಲ್ಲಿ ವೈದ್ಯಾಕಾರಿ ಡಾ| ದುರ್ಗಾ ಪ್ರಸಾದ್ ಮತ್ತು ಸಿಬಂದಿ ವರ್ಗ ಸರ್ವ ಶಕ್ತಿಯಿಂದ ಶ್ರಮಿಸಿದೆ. ಈ ಆರೋಗ್ಯ ಕೇಂದ್ರವನ್ನು ಖಾಸಗಿ ಆಸ್ಪತ್ರೆಗಿಂತಲೂ ಮಿಗಿಲಾಗಿ ವ್ಯವಸ್ಥೆಗೊಳಿಸಿರುವುದು ಸದಾ ನೆನಪಿನ ವಿಚಾರವಾಗಿದೆ. ಮುಂದಕ್ಕೂ ಜನರ ಅಭ್ಯುದಯಕ್ಕೆ ಇಲ್ಲಿನ ಸೇವೆ ಲಭ್ಯವಾಗಲಿ ಎಂದು ಹೇಳಿದರು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಕಾರಿ ಡಾ|ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ ಸರಕಾರದ ಆರೋಗ್ಯ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಐಇಸಿ ಪಾರ್ಕ್ ನಿರ್ಮಿಸಲಾಗಿದೆ. ಆರೋಗ್ಯ ಶಿಕ್ಷಣದ ಮೂಲಕ ಜನರಿಗೆ ಮಾಹಿತಿ ನೀಡಿ ಸಂಪರ್ಕ ಬೆಳೆಸುವುದು ಇದರ ಉದ್ದೇಶವಾಗಿದೆ. ಉದ್ಯಾನವನದ ಪರಿಕಲ್ಪನೆಯಲ್ಲಿ ಆರೋಗ್ಯ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ ಎಂದು ಹೇಳಿದರು. ಚೆನ್ನೈತ್ತೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಜಿ.ಪೈ., ನವೀನ್ಚಂದ್ರ ಶೆಟ್ಟಿ , ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳಾದ ಅಬ್ದುಲ್ ರಶೀದ್, ಗೀತಾ ಎಚ್.ಕೆ. , ಭಾರತಿ, ಕು|ಲತಾ, ಕು|ದೀಪಾ, ಸೈಯದ್ ನಿಸಾರ್, ಚರಣ್ರಾಜ್ , ಯಶೋಧಾ, ಶೀಲಾ ಕೆ., ಮಾಧವ ಬಂಗೇರ, ಆಪ್ತ ಸಮಾಲೋಚಕಿ ಲವೀನಾ ಗ್ಲಾಡಿಸ್, ನೇತ್ರ ಪರಿವೀಕ್ಷಕ ಶ್ರೀಧರನ್ ಕೆ.ವಿ. ಅವರು ಉಪಸ್ಥಿತರಿದ್ದರು.


