ಕಲ್ಲಡ್ಕ: ಸೆ.12 ಬಂಟ್ವಾಳ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ಕನ್ಯಾನ ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ.15 ಕ್ಕೆ ಬೆಳಗ್ಗೆ 10 ಘಂಟೆಗೆ ಏರ್ಪಡಿಸಲಾಗಿದೆ.
ಕನ್ನಡನಾಡು ನುಡಿ ಅಥವಾ ದೇಶಪ್ರೇಮದ ಕವನ, ಬಂಟ್ವಾಳ ತಾಲೂಕಿನ ವೈಶಿಷ್ಟ್ಯಗಳು, ಪ್ರಬಂಧ ಹಾಗೂ ಕಥಾ ರಚನೆಗೆ ವಿಷಯ ಸ್ಥಳದಲ್ಲಿಯೇ ನೀಡಲಾಗುವುದು. ಆಸಕ್ತರು ಭಾಗವಹಿಸುವಂತೆ ತಿಳಿಸಲಾಗಿದೆ.
ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಉದ್ಘಾಟಿಸುವರು. ವಿಟ್ಲ ಮಂಗೇಶ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕ.ಸಾ.ಪ ಅಧ್ಯಕ್ಷ ಜಯಾನಂದ ಪೆರಾಜೆ, ಸಮಿತಿ ಸಂಚಾಲಕ ಕರುಣಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *