ಸುದ್ದಿ 9 ಕಿನ್ನಿಗೋಳಿ;  ಪಾದೂರಿನಲ್ಲಿ ನಿಮರ್ಾಣ ಹಂತದಲ್ಲಿರುವ ಪಾದೂರು-ತೋಕೂರು ಪೈಪ್ಲೈನ್ ಯೋಜನೆ ಪಾದೂರು, ಬೆಳಪು, ಎಲ್ಲೂರು, ಮುದರಂಗಡಿ, ಇನ್ನಾ, ಪಲಿಮಾರು, ಕಿನ್ನಿಗೋಳಿ, ಸೂರಿಂಜೆ, ಕಾಟಿಪಳ್ಳ, ಬಾಳ, ತೋಕೂರು ಮೂಲಕ ಕಚ್ಚಾ ತೈಲ ಸಾಗಣೆಯಾಗಲಿದೆ. ಇದರಿಂದಾಗಿ ಪೈಪ್ಲೈನ್ ಹಾದುಹೋಗುವ ಈ ಪ್ರದೇಶಗಳಲ್ಲಿನ ನೂರಾರು ಎಕರೆ ಭೂಮಿ ಕಳೆದುಕೊಳ್ಳ ಬೇಕಾದ ಭೀತಿಯನ್ನು ಈಗಾಗಲೇ ಜನತೆ ಎದುರಿಸುತ್ತಿದ್ದಾರೆ.

16KinniGAIL02
ಈಗ ಮಗದೊಮ್ಮೆ ಕೇಂದ್ರ ಸರಕಾರದ ಸ್ವಾಮ್ಯಕ್ಕೊಳ ಪಟ್ಟ ಗೈಲ್ ಸಂಸ್ಥೆಯು ಶಿಬರೂರು ನಡುಗೋಡು, ಕಿನ್ನಿಗೋಳಿ ಪರಿಸರದ ಬಟ್ಟಕೋಡಿ, ಗೋಳಿಜೋರ, ಗುತ್ತಕಾಡು, ಶಾಂತಿಪಲ್ಕೆ ಕೊಲ್ಲೂರು ಕುಕ್ಕಟ್ಟೆ ಸಮೀಪ ಸಂಖ್ಯೆಗಳನ್ನು ಬರೆದಿರುವ ಗುರುತು ಕಂಬಗಳನ್ನು ನೆಟ್ಟಿದೆ. ಈ ಪೈಪ್ಲೈನ್ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗುವ ಗುಮಾನಿ ಇದೆ. ಎರಡು ದಿನಗಳ ಹಿಂದೆ ಸಂಜೆ ಅಥವಾ ರಾತ್ರಿ ಹೊತ್ತು ಗುರುತು ಕಂಬಗಳನ್ನು ಜನರಿಗೆ ಮಾಹಿತಿ ಕೊಡದೆ ಹಾಕಿರುವುದು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಪಾದೂರು-ತೋಕೂರು ಪೈಪ್ಲೈನ್ ಅಲ್ಲಿನ ಜನರ ಒತ್ತಡಕ್ಕೆ ಮಣಿದು ಈ ಪರಿಸರಕ್ಕೆ ಬಂದಿರಬಹುದೇ ಅಥವಾ ಹರಿಹರ ಮಂಗಳೂರು ಗ್ಯಾಸ್ ಪೈಪ್ ಲೈನ್ ಯೋಜನೆ ಇದಿರಬಹುದೇ ಎಂದು ಜನರಾಡಿಕೊಳ್ಳುತ್ತ್ತಿದ್ದಾರೆ.
ಈಗಾಗಲೇ ಹಲವಾರು ಸಂಸ್ಥೆಗಳು ಮಂಗಳೂರಿಗೆ ಬಂದಿದ್ದು ಜಿಲ್ಲೆಯ ಜನರ ಉದ್ಯೋಗಕ್ಕೆ ವಿಫುಲ ಅವಕಾಶ ದೊರೆಯುವ ನಿಟ್ಟಿನಲ್ಲಿ ನಾವೆಲ್ಲಾ ಈ ಯೋಜನೆಗಳಿಗೆ ಬೆಂಬಲ ನೀಡಿದ್ದೇವೆ. ಎಸ್.ಇ.ಝಡ್, ಎಮ್.ಆರ್.ಪಿ.ಎಲ್, ಎಚ್.ಪಿ.ಸಿ.ಎಲ್ ಹೀಗೆ ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಜಿಲ್ಲೆಯ ಪ್ರಗತಿಗೆ ನಮ್ಮ ವಿರೋಧವಿಲ್ಲ. ಕೃಷಿಕರ ಫಲವತ್ತಾದ ಭೂಮಿಯ ಮೇಲೆ ಹಾದು ಹೋಗುವ ಯಾವೂದೇ ಕಂಪನಿಯ ಪೈಪ್ ಲೈನ್ಗೆ ನಮ್ಮ ವಿರೋಧವಿದೆ ಈಗ ಮತ್ತೊಮ್ಮೆ ಗೈಲ್ ಸಂಸ್ಥೆಯು ಜಿಲ್ಲೆಯ ವಿವಿಧ ಭಾಗದ ಕೃಷಿ ಭೂಮಿ ಮೇಲೆ ಕೈಯಾಡಿಸುತ್ತಿರುವುದು ವಿಷಾದನೀಯ ಎಂದು ಜನರು ದುಗುಡ ವ್ಯಕ್ತಪಡಿಸುತ್ತಿದ್ದಾರೆ.

 

By suddi9

Leave a Reply

Your email address will not be published. Required fields are marked *