ಮುಂಬಯಿ: ಗುಜರಾತ್ ರಾಜ್ಯದ ವಾಪಿ ನಗರದಲ್ಲಿ ಸೇವಾ ನಿರತ ವಾಪಿ ಕನ್ನಡ ಸಂಘವು ಕಳೆದ ಮಂಗಳವಾರ ರಾತ್ರಿ ಸ್ನೇಹಮಿಲನವನ್ನು ಆಯೋಜಿಸಿತ್ತು. ವಾಪಿ ಕನ್ನಡ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ
ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸುವರ್ಣ ಅವರನ್ನು ಸಂಘದ ಪರವಾಗಿ ಅಧ್ಯಕ್ಷರು
ಹಾರ್ದಿಕವಾಗಿ ಸನ್ಮಾನಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಸಂಘದಆಡಳಿತ ವಿಶ್ವಸ್ಥ ಸದಸ್ಯ ಎಂ.ಬಿ ಭಟ್, ಉಪಾಧ್ಯಕ್ಷ ವಿಶ್ವನಾಥ ಭಂಡಾರಿ, ಗೌ| ಪ್ರ| ಕಾರ್ಯದರ್ಶಿರಾಜೀವ್ ಶೆಟ್ಟಿ, ಗೌ| ಕೋಶಾಧಿಕಾರಿ ಶ್ರೀನಿವಾಸ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವನಿತಾ ಪ್ರಭು ವೇದಿಕೆಯಲ್ಲಿ ಆಸೀನರಾಗಿದ್ದರು. ತುಳು ಕನ್ನಡಿಗರು ಸಂಘಜೀವಿಗಳಾಗಿದ್ದು, ಸಂಘ ಸಂಸ್ಥೆಗಳನ್ನು ಕಟ್ಟಿ ಬಾಳುವ ಮನೋಭಾವಿಗಳು.

Vapi Kannada Sangha-1

Vapi Kannada Sangha-2

Vapi Kannada Sangha-3

Vapi Kannada Sangha-4

Vapi Kannada Sangha-5

Vapi Kannada Sangha-8

Vapi Kannada Sangha-9

Vapi Kannada Sangha-10

Vapi Kannada Sangha-11

Vapi Kannada Sangha-12

Vapi Kannada Sangha-13

Vapi Kannada Sangha-14

Vapi Kannada Sangha-15

Vapi Kannada Sangha-16

Vapi Kannada Sangha-17

Vapi Kannada Sangha-18

Vapi Kannada Sangha-19

Vapi Kannada Sangha-20

Vapi Kannada Sangha-21

Vapi Kannada Sangha-24

Vapi Kannada Sangha-A1

Vapi Kannada Sangha-B1

Vapi Kannada Sangha-B2

Vapi Kannada Sangha-B3

Vapi Kannada Sangha-C1ಹೊಟ್ಟೆಪಾಡನ್ನು ಹರಸುತ್ತಾ ಗುಜರಾತಿ ಭೂಮಿಗೆ ಬಂದರೂ ಇಲ್ಲಿನ ವಾಪಿಯ ಕರ್ಮಭೂಮಿಯಲ್ಲಿ ನಿಮ್ಮ ಸಾಂಘಿಕತೆ ಹಾಗೂ ಸಹೋದರತ್ವದ ಬಾಳು ಮೆಚ್ಚುವಂತಹದ್ದಾಗಿದೆ. ಕನ್ನಡದ ಕೈಂಕರ್ಯ ನಡೆಸುತ್ತಿರುವ ನಿಮ್ಮೆಲ್ಲರ ಸೇವೆ ಸ್ತುತ್ಯರ್ಹ. ಭವಿಷ್ಯತ್ತಿನ್ನುದ್ದಕ್ಕೂ ಇಂತಹ ಸೇವಾ ಮನೋಭಾವ ಮತ್ತು ಸಾಮರಸ್ಯತ್ವದ ಬದುಕು ಸುಗಮವಾಗಿ ಸಾಗಲಿ ಎಂದು ಜಯ ಸುವರ್ಣರು ಸನ್ಮಾನಕ್ಕೆ ಉತ್ತರಿಸಿ ಪ್ರತಿಕ್ರಿಯಿಸಿದರು. ನಮ್ಮ ಸಂಘವು ಅತಿಥಿ ಸತ್ಕಾರಕ್ಕೆ ಮಹತ್ವವನ್ನೀಡುತ್ತದೆ. ಜಾತಿಮತಪಂಥ ಮರೆತು ಸಹಬಾಳ್ವೆಗೆ   ಪ್ರೋತ್ಸಾಹಿಸುತ್ತೇವೆ. ಕರ್ನಾಟಕ ರಾಜ್ಯದ ಸರ್ವೋತ್ಕೃಷ್ಟ ಗೌರವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಇಂದು ನಮ್ಮ ಸಂಸ್ಥೆಗೆ ಭೇಟಿಯನ್ನಿತ್ತ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷಜಯ ಸುವರ್ಣರನ್ನು ಗೌರವಿಸುವ ಭಾಗ್ಯ ದೊರೆತ ನಾವುಗಳು ಧಣ್ಯರು. ಸುವರ್ಣರಿಗೆ ಭವಿಷ್ಯತ್ತಿನ್ನುದ್ದಕ್ಕೂ ಮತ್ತಷ್ಟು ಪ್ರತಿಷ್ಠಿತ ಪುರಸ್ಕಾರಗಳು ಹರಸಿ ಬರಲಿ. ತಮ್ಮ ಸಾರಥ್ಯ ಬ್ಯಾಂಕ್‍ನ್ನು ವಾಪಿಯಲ್ಲೂ ಆರಂಭಿಸಿರುವುದು ನಮಗೂ ಹಿರಿಮೆ ತಂದಿದೆ. ನಮ್ಮೆಲ್ಲರ ಸಹಯೋಗ ನೀಡುತ್ತಿದ್ದು, ಇಲ್ಲಿನ ವಾಪಿ ಶಾಖೆಯೂ ಸರ್ವೋನ್ನತ ಪ್ರಗತಿ ಹೊಂದಲಿ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾರೈಸಿದರು. ಬ್ಯಾಂಕ್‍ನ ನಿರ್ದೇಶಕ ಆರ್.ಡಿ.ಪೂಜಾರಿ, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್, ಉಪ ಪ್ರಧಾನ ಪ್ರಬಂಧಕ ಮೋಹನ್‍ದಾಸ್ ಹೆಜ್ಮಾಡಿ, ಅಭಿವೃದ್ಧಿ ಇಲಾಖೆಯ ಅಧಿಕಾರಿ ಸುನೀಲ್‍ಗುಜರನ್, ವಾಪಿ ಶಾಖಾ ಮುಖ್ಯಸ್ಥ ಸುರೇಶ್ ಎಸ್.ಬಂಗೇರಾ, ಎನ್.ಎಂ ಸನೀಲ್, ಜಗನ್ನಾಥ್ ಅಮೀನ್ ಸೇರಿದಂತೆ ಸಂಘದ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ವಾಪಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್ ಕಾರಂತ್ ಸ್ವಾಗತಿಸಿ ಸಂಘದ ಕಾರ್ಯವೈಖರಿಯನ್ನು ತಿಳಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಸಂಘದ ರಜತ ಸ್ಮರಣಸಂಚಿಕೆ `ಪ್ರೇರಣಾ’ವನ್ನು ಜಯ ಸುವರ್ಣ ಅವರಿಗೆ ನೀಡಿ ಗೌರವಿದರು. ಸಂಘದ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.ಪ್ರ|ಕಾರ್ಯದರ್ಶಿರಾಜೀವ್ ಶೆಟ್ಟಿ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *