ಮುಂಬಯಿ:  ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ ಸತತ`ಸರ್ವೋತ್ಕೃಷ್ಟ ಬ್ಯಾಂಕ್’ ಪುರಸ್ಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್  ತನ್ನ 71ನೇ ಶಾಖೆಯನ್ನು  ಸೆ. 9ರಂದು  ಬುಧವಾರ ಬೆಳಿಗ್ಗೆ ಗುಜರಾತ್ ರಾಜ್ಯದ ವಲ್ಸಾಡ್ ಅಲ್ಲಿನ ದಾಮನ್ ರಸ್ತೆಯಲ್ಲಿನ ವಾಪಿ ನಗರದ ಸ್ಟಾಪ್ ಎಂಡ್ ಗೋ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ  ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಗುಜರಾತ್ ನಾಡಿನ ಜನತೆಗೆ ಭಾರತ್ ಬ್ಯಾಂಕ್‍ನ ಪ್ರಥಮ ಶಾಖೆಯನ್ನು ಸೇವಾರ್ಪಣೆ ಗೈದರು. ಸ್ವಾಮಿನಾರಾಯಣ ಗುರುಕುಲ ಎಜ್ಯುಕೇಶನ್ ಸಂಸ್ಥಾ ವಾಪಿ ಇದರ ಮುಖ್ಯಸ್ಥ ಶ್ರೀ ಭಕ್ತಿ ಕಿಶೋರದಾಸ್ ಸ್ವಾಮೀಜಿ ಅವರು ಜ್ಯೋತಿ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ  ಚಾಲನೆ ನೀಡಿದರು.

Bharat-Bank-71-Br.-Vapi-A1

Bharat Bank 71 Br. Vapi - 2

Bharat Bank 71 Br. Vapi - 3

Bharat Bank 71 Br. Vapi - 4

Bharat Bank 71 Br. Vapi - A1

Bharat Bank 71 Br. Vapi - A2

Bharat Bank 71 Br. Vapi - A3

Bharat Bank 71 Br. Vapi - A4

Bharat Bank 71 Br. Vapi - BB

Bharat Bank 71 Br. Vapi -6

Bharat Bank 71 Br. Vapi -7

Bharat Bank 71 Br. Vapi -8

Bharat Bank 71 Br. Vapi -9

Bharat Bank 71 Br. Vapi -10

Bharat Bank 71 Br. Vapi -11

Bharat Bank 71 Br. Vapi -12

Bharat Bank 71 Br. Vapi -13

Bharat Bank 71 Br. Vapi -17

ಭಾರತ್ ಬ್ಯಾಂಕ್ ತನ್ನ ಸೇವೆಯನ್ನು ರಾಷ್ಟ್ರದ ಉತ್ತರಾರ್ಧಕ್ಕೆ ವಿಸ್ತರಿಸಿ ಗುಜರಾತ್ ರಾಜ್ಯಕ್ಕೆ ಕಾಲಿರಿಸಿದ್ದು ಶುಭ ಸಂದೇಶವಾಗಿದೆ. ಜೀವನದಲ್ಲಿ ಪ್ರಗತಿ ಸಾಧಿಸಬೇಕೆನ್ನುವುದು ಪ್ರತೀಯೋರ್ವ ಮಾನವನ ಆಶಯವಾಗಿರುತ್ತದೆ. ಕಠಿಣ ಪರಿಶ್ರಮ ವಿನಃ ಯಾವನಿಗೂ ಉತ್ಕರ್ಷಾಭಿದ್ಧಿ ಫಲಿಸದು. ಅಂತೆಯೇ ಗತ ಪರಿಶ್ರಮದ ಫಲವನ್ನು ಸದ್ಯ ಬ್ಯಾಂಕ್ ಅನುಭವಿಸುತ್ತಿದೆ. ಇದರ ಹಿಂದಿನ ಧೀಶಕ್ತಿ ಜಯ ಸುವರ್ಣರಾಗಿದ್ದನ್ನು ನಾನು ತಿಳಿದಿದ್ದು ಅವರ ಹೆಸರಿನಂತೆಯೇ ಈ  ಬ್ಯಾಂಕ್  ಸ್ವರ್ಣಮಯವಾಗಿ ಸಮೃದ್ಧಿ ಕಾಣಲಿ. ಭಾರತದ ಪರಂಪರೆಗೆ ಹೊಸ ಕಳೆಯನ್ನಿತ್ತಿದೆ. ಪ್ರತೀಯೋರ್ವ ಭಾರತೀಯರ ಭಾವನೆಗಳನ್ನು ತಿಳಿದು ಹಣಕಾಸು ವ್ಯವಹಾರದೊಂದಿಗೆ ಸ್ಪಂದಿಸುವ ಈ ಬ್ಯಾಂಕ್ ಗುಜರಾತ್ ಜನತೆಯ ಬದುಕಿಗೂ ವರದಾನವಾಗಲಿ ಎಂದು ಕಿಶೋರದಾಸ್ ಸ್ವಾಮೀಜಿ ಅನುಗ್ರಹಿಸಿದರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಎಟಿಎಂ ಸೇವೆಯನ್ನು, ಬ್ಯಾಂಕ್‍ನ ನಿರ್ದೇಶಕ ಕೆ.ಎನ್ ಸುವರ್ಣ ಸೇಫ್‍ ಲಾಕರ್‍ನ್ನೂ ಹಾಗೂ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ  ಕಂಪ್ಯೂಟರೀ ಕೃತ ಬ್ಯಾಂಕಿಂಗ್ ಸೇವೆಗೆ ಚಾಲನೆಯನ್ನಿತ್ತರು.
ನಮ್ಮೂರ ಭಾರತ್ ಬ್ಯಾಂಕ್‍ನ್ನು ನಮ್ಮ ಕರ್ಮಭೂಮಿ ಗುಜರಾತ್ ರಾಜ್ಯಕ್ಕೆ ಸ್ವಾಗತಿಸುತ್ತೇವೆ. ಇದು ಗುಜರಾತ್ ಜನತೆಯ ಅಭಿವೃದ್ಧಿಗೆ ಪೂರಕವಾಗಲಿ. ಪ್ರತೀಯೋರ್ವ ಜನತೆಯ ಮನಮನೆಗಳನ್ನು ಬೆಳಗಿಸಲಿ ಎಂದು
ದಯಾನಂದ ಬೋಂಟ್ರಾ ಬರೋಡಾ ಶುಭಾರೈಸಿದರು.

ಉದ್ಯಮಿ ಅಶೋಕ್ ಜೈನ್ ಮಾತನಾಡಿ ಭಾರತ್ ಬ್ಯಾಂಕ್‍ನಿಂದಲೇ ನಾನು ಉದ್ಯಮಶೀಲನಾಗಿದ್ದು, ಇಂದು ನನ್ನ ಇಬ್ಬರು ಪುತ್ರರನ್ನೂ ಯುವ ಉಧ್ಯಮಿಗಳಾಗಿ ಮಾಡಿ ಯಶಸ್ಸು ಕಂಡಿದ್ದೇನೆ. ಕಳೆದ ಸುಮಾರು 32 ವರ್ಷಗಳಿಂದ ವ್ಯವಹರಿಸುತ್ತಿದ್ದು ನಮ್ಮ ಇಚ್ಫೆ, ಅವಶ್ಯಕ್ಕಾಸಾರವಾಗಿ ಹಣಕಾಸು ನೆರವು ಪಡೆದು ಸಾಧಕನಾಗಿದ್ದೇನೆ.

ನಮ್ಮೆಲ್ಲರ ಸಮೃದ್ಧಿಯಂತೆ ಬ್ಯಾಂಕ್ ಕೂಡಾ ಅಭಿವೃದ್ಧಿ ಹೊಂದಲಿ. ಸ್ಥಾನೀಯ ವ್ಯಾಪಾರಿ ವರ್ಗಕ್ಕೂ ಆಧಾರವಾಗಲಿ ಎಂದರು. ವಾಪಿ ಕನ್ನಡ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಎಂದು ಬ್ಯಾಂಕ್ ಬ್ಯಾಂಕ್‍ನ ಶ್ರೇಯೋಭಿವೃದ್ಧಿಯ ರೂವಾರಿ ಜಯ ಸುವರ್ಣ ಮತ್ತು ಬ್ಯಾಂಕ್‍ನ ಆಡಳಿತ ಮಂಡಳಿ ಮತ್ತು ಸರ್ವ ಸಿಬ್ಬಂದಿ ವರ್ಗಕ್ಕೆ ಸಂಘದ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿ ಶುಭ ಕೋರಿದರು.

ಉದ್ಘಾಟನಾ ಸಮಾರಂಭದಲ್ಲಿ ಕಟ್ಟಡದಮಾಲಕ ರಾಜು ಭಾಯಿ, ವಾಪಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್ ಕಾರಂತ್, ಸುಂದರ್ ಸುವರ್ಣ ವಿಲೇಪಾರ್ಲೆ, ಠಾಕೂರ್ ಭಾಯಿ, ಕೆ.ಎಸ್ ಅಂಚನ್, ಮನೋಜ್ ಪೂಜಾರಿ, ಪ್ರಭಾಕರ್ ಪೂಜಾರಿ ಸೂರತ್, ಮನೋಜ್ ಎಂ.ಪೂಜಾರಿ, ಹರೀಶ್ ಎನ್.ಪೂಜಾರಿ, ಎಂ.ಎಸ್ ರಾವ್ ಅಹ್ಮದಾಬಾದ್, ರಜನಿ ಬಿ.ಶೆಟ್ಟಿ, ಸುಖೇಶ್ ಶೆಟ್ಟಿ, ದೇವು ಪೂಜಾರಿ, ಸದಾಶಿವ ಅಮೀನ್, ವಿಠಲ ಪೂಜಾರಿ, ಅಶೋಕ್ ಕೋಟ್ಯಾನ್, ರೋಹಿತ್ ಅಂಚನ್, ಕಿರಣ್ ಎಸ್.ಅಂಚನ್ ಕಡಂದಲೆ (ವಾಪಿ), ನಾಗೇಶ್ ಪೂಜಾರಿ, ಶ್ರೀನಿವಾಸ ಕರ್ಕೇರಾ, ನಿಲೇಶ್ ಪಿ.ಪೂಜಾರಿ, ಜಯೇಶ್ ವಾಪಿ, ವಾಸು ಪೂಜಾರಿ ಬರೋಡ, ಜಗನ್ನಾಥ್ ಅಮೀನ್, ಪದ್ಮನಾಭ ಕೆ.ಪೂಜಾರಿ, ಜಿತೇಶ್ ಕೋಟ್ಯಾನ್, ಯಶವಂತ ಕೋಟ್ಯಾನ್, ಜಗದೀಶ್ ಅಮೀನ್ ಮುಂಬಯಿ ಸೇರಿದಂತೆ ಸ್ಥಾನೀಯ ನೂರಾರು ಗ್ರಾಹಕರು, ಹಿತೈಷಿಗಳು ಆಗಮಿಸಿ ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಕೋರಿದರು. ಬ್ಯಾಂಕ್‍ನ ನಿರ್ದೇಶಕರುಗಳಾದ ಆರ್.ಡಿ.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಮಾಜಿ ನಿರ್ದೇಶಕರುಗಳಾದ ಎಲ್.ವಿಅಮೀನ್,ಎನ್.ಎಂ ಸನೀಲ್, ಮುಖ್ಯ ಪ್ರಧಾನವ್ಯವಸ್ಥಾಪಕಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶ್ರೀಮತಿ ಶೋಭಾ ದಯಾನಂದ್, ಅಭಿವೃದ್ಧಿಇಲಾಖೆಯಅಧಿಕಾರಿಗಳಾದಸುನೀಲ್‍ಗುಜರನ್, ಅವೀಶ್ ಎಸ್.ಪೂಜಾರಿ, ವಿಜಯ್ ಪಾಲನ್ ಉಪಸ್ಥಿತರಿದ್ದು ಶುಭ ಕೋರಿದರು. ಶ್ರೀ ಶೇಖರ್ ಶಾಂತಿ ಉಳ್ಳೂರು ಮತ್ತು ಶ್ರೀ ಧನಂಜಯ ಶಾಂತಿ ಉಳ್ಳೂರು ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಗಣಹೋಮ, ದ್ವಾರಪೂಜೆಗಳನ್ನು ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥ-ಪ್ರಸಾದ ವಿತರಿಸಿದರು. ಶಾಖೆಯ ಸಹ ಪ್ರಬಂಧಕ ಹರೀಶ್ ವಿ.ಪೂಜಾರಿ ಮತ್ತು ಶ್ರೀಮತಿ ಮಾಯಾ ಹರೀಶ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧಕಹಾಗೂ ಅಭಿವೃದ್ಧಿ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಬ್ಯಾಂಕ್‍ನ 38 ವರ್ಷಗಳ ಸುದೀರ್ಘಾವಧಿಯ ಸೇವೆಯಿಂದ 71ನೇ ಶಾಖೆಯ ಸೇವಾರಂಭದ ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು ಹಾಗೂ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರಿಗಳಾದ ರಾಹುಲ್ ಟಿ.ಸಾಲ್ಯಾನ್, ರೊನಕ್ ಗೊಸಾಲಿಯಾ, ಕಪಿಲ್ ಪೂಜಾರಿ, ಕಿಶೋರ್ ಎ.ಪೂಜಾರಿ, ಅನಿಲ್‍ಕುಮಾರ್ ಶ್ಹಾ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಶಾಖಾ ಮುಖ್ಯಸ್ಥ ಸುರೇಶ್ ಎಸ್.ಬಂಗೇರಾ ಕೃತಜ್ಞತೆ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *