ಮೂಡುಬಿದಿರೆ: ಹೊಸಬೆಟ್ಟುವಿನ ಇತಿಹಾಸ ಪ್ರಸಿದ್ಧ ಹೋಲಿ ಕ್ರಾಸ್ತ ಚರ್ಚಿನಲ್ಲಿ ಮೊಂತಿಹಬ್ಬ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಚರ್ಚ್ ಧರ್ಮಗುರು ರೆ.ಫಾ ಸಂತೋಷ್ ರೊಡ್ರಿಗಸ್ ತೆನೆಹಬ್ಬದ ಸಂದೇಶದೊಂದಿಗೆ ಆಶೀರ್ವಚನ ನೀಡಿದರು. ತೆನೆಪೂಜೆ, ತೆನೆ ಆಶೀವರ್ಚನ, ಬಲಿಪೂಜೆ,ವಾಹನ ಆಶೀವರ್ಚನ ನಡೆಯಿತು, ಹೊಸತೆನೆಯಿಂದ ಮಾಡಲಾದ ಪಾಯಸವನ್ನು ಭಕ್ತರಿಗೆ ವಿತರಿಸಲಾಯಿತು.
ಮೇರಿಯಮ್ಮ ಪ್ರತಿಮೆಯ ಬಳಿಯಿಂದ ಚರ್ಚ್‍ಗೆ ತೆನೆ ಮರವಣಿಗೆ ನಡೆಯಿತು.






