ಮೂಡುಬಿದಿರೆ: ಶ್ರೀಗೋಪಾಲಕೃಷ್ಣ ದೇವಳದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಸಂಯೋಜನೆಯಲ್ಲಿ ಅವಿಭಜಿತ ಜಿಲ್ಲೆಯಲ್ಲೇ ವಿಭಿನ್ನ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ಭಾನುವಾ ಜರುಗಿತು.
ಮೂಡುಬಿದಿರೆ ಗೋಪಾಲ ಕೃಷ್ಣ ದೇವಸ್ಥಾನದಿಂದ ಹೊರಟ ದೇವರ ಪಲ್ಲಕಿಯ ಜೊತೆ ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿ ಹಿಮ್ಮೇಳದೊಂದಿಗೆ ಹೆಜ್ಜೆಯಿರಿಸಿದರು.

ಮೂಡುಬಿದಿರೆ ಕಲ್ಸಂಕದಿಂದ ಮಂಗಳೂರು-ಮೂಡುಬಿದಿರೆ ಹೆದ್ದಾರಿಯನ್ನು ಪೇಟೆಯನ್ನು ಸಂಪರ್ಕಿಸುವ ನಿಶ್ಮಿತಾ, ಪಮಚರತ್ನ ಕಟ್ಟಡದವರೆಗೆ ಮೊಸರು ಕುಡಿಕೆಗಳನ್ನು ಕಟ್ಟಲಾಗಿತ್ತು. ಹಿಮ್ಮೇಳದ ಸಂಗೀತದ ನಾದಕ್ಕೆ ಹೆಜ್ಜೆಯಿರಿಸುವ ಶ್ರೀಕೃಷ್ಣ ವೇಷಧಾರಿ( ದಿವಾಕರ ಕುಲಾಲ್) ಒಂದೊಂದೇ ಕುಡಿಕೆಗಳನ್ನು ಒಡೆದರು.
ಪಾರಂಪರಿಕ ಮೊಸರುಕುಡಿಕೆಯ ಜೊತೆಗೆ ಪೇಟೆಯಲ್ಲಿರುವ ಕೃಷ್ಣ ಕಟ್ಟೆಯಲ್ಲಿ ಸಾಂಸ್ಕøತಿಕ ಕಲಾಪಗಳೂ ಗಮನಸೆಳೆಯಿತು. ಮಂಜೇಶ್ವರ ನಾಟ್ಯನಿಲಯದವರಿಂದ ನೃತ್ಯ ಝೇಂಕಾರ,ವೇಣಿ ಸುಬ್ರಹ್ಮಣ್ಯಂ ಮತ್ತು ಕೆದಿಲ ಜಯರಾಮ ಭಟ್ ಬಳಗದವರಿಂದ ಯಕ್ಷ-ದಾಸ-ಗಾನ-ನಾಟ್ಯ ವೈಭವ ನಡೆಯಿತು.




