ಮೂಡುಬಿದರೆ: ನಗರದ ಕೊರ್ಪಸ್ ಕ್ರಿಸ್ತಿ ಚರ್ಚ್‍ನಲ್ಲಿ ಮೊಂತಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
Moodbidri Church (1)

Moodbidri Church (2)

Moodbidri Church (3)

Moodbidri Church (4)

Moodbidri Church (5)

Moodbidri Church (7)

Moodbidri Church (8)

Moodbidri Church (9)

Moodbidri Church (10)

Moodbidri Church (14)

Moodbidri Church (16)
ನವಮಿ ವಾಣಿಜ್ಯ ಸಂಕೀರ್ಣದ ಬಳಿ ತೆನೆಗೆ ವಿಶೇಷ ಪೂಜೆ ಹಾಗೂ ಧರ್ಮಗುರುಗಳಿಂದ ತೆನೆಹಬ್ಬ ಸಂದೇಶ ನಡೆಯಿತು. ಚರ್ಚ್‍ನ ಧರ್ಮಗುರು ರೆ.ಫಾ. ಆಸ್ಟಿನ್ ಪೀಟರ್ ಪೆರಿಸ್ ಆಶೀವರ್ಚನ ನೀಡಿ, ಮೊಂತಿ ಹಬ್ಬ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲೂ ಬಾಂಧವ್ಯ ಬೆಸೆಯುವ ಹಬ್ಬ. ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಬೇಕು ಎನ್ನುವ ಸಂದೇಶವನ್ನೂ ಈ ಹಬ್ಬ ನೀಡುತ್ತದೆ. ಪ್ರಕೃತಿ ಆರಾಧನೆಗೂ ಈ ಹಬ್ಬ ಮಹತ್ವ ಹೊಂದಿದೆ ಎಂದರು.
ಬಳಿಕ ಸಮಾಜಮಂದಿರ ಕಾಂಪ್ಲೆಕ್ಸ್‍ನಿಂದ ಪೇಟೆಯ ಮುಖ್ಯರಸ್ತೆಯಲ್ಲಿ ಸಾಗಿ ಚರ್ಚಿನವರೆಗೆ ಬಾಲಯೇಸುವಿನ ಮೂರ್ತಿ ಹಾಗೂ ತೆನೆಯ ಮೆರವಣಿಗೆ ನಡೆಯಿತು. ಚರ್ಚ್ ಆವರಣದಲ್ಲಿ ಮೂರ್ತಿಗೆ ಪುಷ್ಪಾರ್ಪಣೆ ಮಾಡಲಾಯಿತು. ನಂತರ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಅನಿಲ್ ಲೋಬೋ ಧರ್ಮಗುರುಗಳ ಸಂದೇಶವನ್ನು ಕನ್ನಡದಲ್ಲಿ ಓದಿದರು.

By suddi9

Leave a Reply

Your email address will not be published. Required fields are marked *