ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ ಶುಭಾರಂಭಗೊಂಡ ಸುವ್ಯವಸ್ಥಿತ ‘ಶ್ರೀ ಸತ್ಯದೇವತಾ ರಿಕ್ಷಾ ಪಾರ್ಕಿಂಗ್’ನ್ನು ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ದೇರಾಜೆ ಲೋಕಾರ್ಪಣೆ ಮಾಡಿದರು. ರಿಕ್ಷಾ ಪಾರ್ಕಿಂಗ್ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಇಲ್ಲಿನ ಪ್ರಯಾಣಿಕರಿಗೆ ರಿಕ್ಷಾ ಚಾಲಕರಿಂದ ಪ್ರಾಮಾಣಿಕ ಮತ್ತು ಗುಣಮಟ್ಟದ ಸೇವೆ ಲಭಿಸಲಿ ಎಂದರು.
ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕೆಡಿಪಿ ಸದಸ್ಯ್ಯುಮೇಶ ಬೋಳಂತೂರು, ಪಿಡಿಒ ಶಮಂತ ಕುಮಾರಿ ಮತ್ತಿತರರು ಶುಭ ಹಾರೈಸಿದರು.
ಸ್ಥಳೀಯ ಗ್ರಾ.ಪಂ.ಸದಸ್ಯರಾದ ಮಾಧವ ಕರ್ಬೆಟ್ಟು, ಕಿಶೋರ್ ಶೆಟ್ಟಿ, ಸತ್ಯದೇವತಾ ಟ್ರಸ್ಟಿನ ಅಧ್ಯಕ್ಷ ಪಿ.ನಿತ್ಯಾನಂದ ಸಪಲ್ಯ, ರಿಕ್ಷಾ ಚಾಲಕರ ಸಂಘಟನೆ ಪ್ರಮುಖರಾದ ಅಣ್ಣು ಕುಲಾಲ್, ದಿವಾಕರ ಏಲಬೆ, ಪ್ರಭಾಕರ ನಾಯಿಲ, ಮಿಥುನ್ ಗಾಣಿಗ, ನವೀನ ಬಂಗೇರ, ಸತೀಶ ಶೇಡಿಗುರಿ, ಪದ್ಮನಾಭ ಕರ್ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
