ದೆಹಲಿ: ನನಗೀಗ ಬಲೂನು, ಚಾಕ್ಲೇಟ್ ಹಿಡಿಯುವ ವಯಸ್ಸಲ್ಲ ಆದರೆ ರಾಹುಲ್ ಮಾನಸಿಕವಾಗಿ ಅಪ್ರಬುದ್ಧರು ಹಾಗಾಗಿ ಅವರು ಬಲೂನು, ಚಾಕಲೇಟ್ ಎಂದೆಲ್ಲಾ ಮಾತನಾಡುತ್ತಾರೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. 15 ರಾಜ್ಯಗಳಲ್ಲಿ, 100 ಸ್ಥಳಗಳಲ್ಲಿ ತ್ರಿಡಿ ಸಮಾವೇಶ ನಡೆಸಿದ ಮೋದಿ, “ರಾಹುಲ್ ವಯಸ್ಸನ್ನು ಪರಿಗಣಿಸಬೇಡಿ. ಅವರು ಮಾನಸಿಕವಾಗಿ ಪ್ರೌಢರಾಗಿಲ್ಲ. ಆದ್ದರಿಂದ ಮಿಠಾಯಿ ಬಗ್ಗೆ ಮಾತನಾಡುತ್ತಿರುತ್ತಾರೆ”. ಮಾನಸಿಕವಾಗಿ ರಾಹುಲ್ ಇನ್ನೂ ಮಗುವಂತೆ. ಅವರು ಪ್ರೌಢರಾಗಿದ್ದರೆ, ಗುಜರಾತ್ ಸರ್ಕಾರದ ಮುನ್ನೂರು ಮಾಡೆಲ್‌ಗಳಿಗೆ ಸಂಯುಕ್ತ ರಾಷ್ಟ್ರ ಸಂಘ ಮತ್ತು ಭಾರತ ಸರ್ಕಾರ ಪ್ರಶಸ್ತಿ ನೀಡಿರುವ ವಿಷಯ ಅವರಿಗೆ ತಿಳಿದಿರುತ್ತಿತ್ತು” ಎಂದು ಮೂದಲಿಸಿದ್ದಾರೆ.

narendra-modi-vs-rahul-gandhi

ಇತ್ತೀಚಿಗೆ ಮಹಾರಾಷ್ಟ್ರದ ಮರಾಠಾವಾಡಾದಲ್ಲಿ ಪ್ರಚಾರ ಸಭೆಯನ್ನು ನಡೆಸುತ್ತ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಗುಜರಾತಿನ ಅಭಿವೃದ್ಧಿ ಮಾದರಿಯನ್ನು ‘ಮಿಠಾಯಿ ಮಾದರಿ’ ಎಂದು ಕರೆದಿದ್ದರು. ನಮೋ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವ ಮೂಲಕ ಕೇವಲ ಒಬ್ಬ ವ್ಯಕ್ತಿಗೆ ಲಾಭ ಸಿಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದ್ದರು.

By suddi9

Leave a Reply

Your email address will not be published. Required fields are marked *