ಕಡೇಶಿವಾಲಯ ನದಿ ಕಿನಾರೆಯಲ್ಲಿ ಶಾರದ ಅವರ ಮೃತದೇಹ ಪತ್ತೆಬಂಟ್ವಾಳ: ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೊರಟ ಮಹಿಳೆ ಮತ್ತುಮಗು ಹಿಂದಿರುಗಿ ಬರದಿರುವ ಬಗ್ಗೆ ಶುಕ್ರವಾರ ವಿಟ್ಲಠಾಣೆಯಲ್ಲಿ ಪ್ರಕರಣದಾಖಲಾಗಿತ್ತು.
ಕಡೇಶಿವಾಲಯ ನದಿ ಕಿನಾರೆಯಲ್ಲಿ ಶಾರದ ಅವರ ಮೃತದೇಹ ಪತ್ತೆ

ಕಂಬಳಬೆಟ್ಟು ಕಂಬಳಿ ಮೂಲೆ ನಿವಾಸಿ ಮುಂಬೈಯಿ ಉದ್ಯೋಗಿ ಸತೀಶ್ಅವರ ಪತ್ನಿ ಶಾರದ (32), ಪುತ್ರಚಿರಣ್(1.6) ನಾಪತ್ತೆಯಾಗಿರುವವರಾಗಿದ್ದರು.
ಗುರುವಾರಬೆಳಗ್ಗೆ ಪರಿಯಲ್ತಡ್ಕದಲ್ಲಿರುವ ಖಾಸಗೀ ಬ್ಯಾಂಕ್ ನಲ್ಲಿ ಸ್ತ್ರೀಶಕ್ತಿ ಗುಂಪಿನ ಹಣ ಪಾವತಿಸಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮರಳಿ ಬಂದಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗಲೂ ಪತ್ತೆಯಾಗದ ಹಿನ್ನಲೆಯಲ್ಲಿ ಪಕೀರ ಗೌಡ ವಿಟ್ಲ ಠಾಣೆಗೆ ದೂರಿ ನೀಡಿದ್ದರು. ಅವರು ಉಪ್ಪಿನಂಗಡಿ ಸೇತುವೆಯಿಂದ ನದಿಗೆ ಹಾರಿದ ಬಗ್ಗೆ ಸ್ಥಳಿಯರು ಪೋಲಿಸ್ ಇಲಾಖೆಗೆ ತಿಳಿಸಿದ್ದರು. ಇಂದು ಸಂಜೆ ಕಡೇಶಿವಾಲಯ ನದಿ ಕಿನಾರೆಯಲ್ಲಿ ಶಾರದ ಅವರ ಮೃತದೇಹ ಪತ್ತೆಯಾಗಿದೆ ಪೋಲಿಸರು ಮ್ರತದೇಹದ ಪರಿಶಿಲನೆ ನಡೆಸುತ್ತಿದ್ದಾರೆ. ಮಗು ಚಿರಣ್ ಅವರ ಹುಡುಕಾಟ ಮುಂದುವರಿದಿದೆ.
