ಬಂಟ್ವಾಳ, ಸೆ. 5: ಒಡಿಯೂರಿನಲ್ಲಿ ಸೆ. 19, 20ರಂದು ನಡೆಯುವ ಬಂಟ್ವಾಳ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾದ ಸಂಯೋಜನೆ ಸಭೆಯು. ಸೆ. 4ರಂದು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಯಲ್ಲಿ ಸ್ವಾಗತ ಸಮಿತಿ ಅಧ್ಯ್ಷಕ ಕೈಯೂರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮ್ಮೇಳನ ರೂಪುರೇಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಮಂತ್ರಣ ಪತ್ರಿಕೆ ಸಿದ್ದತೆ. ವಿವಿಧ ಗೋಷ್ಠಿ, ಕಾರ್ಯಕ್ರಮ, ಉದ್ಘಾಟನೆ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿ ಸೂಕ್ತ ವ್ಯಕ್ತಿ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ನಡೆಸಲು ಅಭಿಪ್ರಾಯ ಸ್ವೀಕರಿಸಲಾಯಿತು.

ಮಕ್ಕಳಿಗೆ ಪ್ರಬಂಧ, ಕಥೆ, ಕವನ ಸ್ಪರ್ಧೆಯನ್ನು ಸೆ. 15ರಂದು ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲು ನಿರ್ಧರಿಸಿದ್ದು ಆಸಕ್ತ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಹಾಜರಿದ್ದು ಕ್ಷೇತ್ರದಲ್ಲಿ ಉಪನ್ಯಾಸಕ ಕರುಣಾಕರ ( 9945932883) ಅವರನ್ನು ಸೆ. 14 ಮುಂಚಿತವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸಲು ಪ್ರಕಟಿಸಲಾಗಿದೆ.

ಕವನ ಸ್ಪರ್ಧೆಗೆ- ` ಕನ್ನಡ ನಾಡು ನುಡಿ ಅಥವಾ ದೇಶಪ್ರೇಮ ವಿಷಯವಾಗಿದೆ. ಪ್ರಬಂಧ ಸ್ಪರ್ಧೆಗೆ -`ಬಂಟ್ವಾಳ ತಾಲೂಕಿನ ವೈಶಿಷ್ಟ್ಯಗಳು’ ವಿಷಯವಾಗಿದೆ. ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವ ಸ್ಪರ್ಧೆಗೆ ಇದ್ದು ವಿಷಯವನ್ನು ಸ್ಥಳದಲ್ಲಿಯೇ ನೀಡಲಾಗುವುದು ಎಂದು ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷರು ತಿಳಿಸಿದ್ದಾರೆ.

ಸ್ಪರ್ಧೆಗೆ ಪ್ರೌಢ ಶಾಲೆ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಿದೆ. ಸಮ್ಮೇಳನದಲ್ಲಿ ವಿದ್ಯಾರ್ಥಿ ಕವಿ ಗೋಷ್ಠಿ ಕಾರ್ಯಕ್ರಮ ಆಯೋಜಿಸಿದ್ದು ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ಸೆ. 8 ರೊಳಗೆ ಕಸಾಪ ಅಧ್ಯಕ್ಷರನ್ನು ಸಂಪರ್ಕಿ ಸಲು ಕೋರಲಾಗಿದೆ.

ಸಭೆಯಲ್ಲಿ ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ, ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಕಸಾಪ ಕೋಶಾಕಾರಿ ನಿವೃತ್ತ ತಹಶೀಲ್ದಾರ್ ಕೆ. ಮೋಹನ ರಾವ್, ತಾಲೂಕು ಗೌ. ಕಾರ್ಯದರ್ಶಿ ಡಾ. ಗಿರೀಶ್ ಭಟ್ ಅಜೆಕಲ, ಡಿ.ಬಿ. ಅಬ್ದುಲ್ ರಹಿಮಾನ್ ತುಂಬೆ, ಕೋಶಾಕಾರಿ ರಾಜರಾಮ ನಾಯಕ್, ಉಪನ್ಯಾಸಕ ವಿ.ಸು.ಭಟ್, ಸ್ವಾಗತ ಸಮಿತಿ ಕಾರ್ಯದರ್ಶಿ , ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್, ಸ್ವಾಗತ ಸಮಿತಿ ಉಪಾಧ್ಯಕ್ಷ ರಾಜಾ ಬಂಟ್ವಾಳ, ನಿವೃತ್ತ ಶಿಕ್ಷಕ ಕೃಷ್ಣ ಶರ್ಮ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *