ಬಂಟ್ವಾಳ: ಮಗುವನ್ನು ಪ್ರೀತಿಸುವ ಹಾಗೂ ಮಗುವಿನ ಭಾವನೆಯನ್ನು ಅರ್ಥೈಸಿಕೊಳ್ಳುವ ಶಿಕ್ಷಕರ ಸಂಖ್ಯೆ ಹೆಚ್ಚಳವಾಗಬೇಕಾದ ಅಗತ್ಯವಿದೆ, ಶಾಲೆಯಲ್ಲಿ ಭಯ ಮುಕ್ತವಾಗಿ ಮಗುಸ್ನೇಹಿ ವಾತಾವರಣ ನಿರ್ಮಾಣವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆಸಮಿತಿ ಬಂಟ್ವಾಳ, ರೋಟರೀ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿ ಸನ್ಯಾಸ ಸ್ವೀಕರಿಸಿದಷ್ಟೇ ಪವಿತ್ರವಾದುದು. ತನ್ನ ನಡೆನುಡಿಯಲ್ಲಿ ಶಿಕ್ಷಕ ಸ್ವಲ್ಪ ಎಡವಿದರೂ ಅದು ವಿದ್ಯಾರ್ಥಿಯ ಭವಿಷ್ಯದ ಮೇಲೆ ಪ್ರಭಾವ ಬೀರುವುದಲ್ಲದೆ, ಆತನನ್ನು ಇಡೀ ಸಮುದಾಯ ತೆರೆದ ಕಣ್ಣಿನಿಂದ ಗಮನಿಸುತ್ತಿರುತ್ತದೆ ಎಂಬುದನ್ನು ಶಿಕ್ಷಕರು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಜಾತಿಮತ ಪಂಥ ಬೇಧದ ಗಡಿಯನ್ನು ಮೀರಿದ ಮಾನವಧರ್ಮದ ಸ್ಪರ್ಶವುಳ್ಳ ವಿದ್ಯಾರ್ಥಿ ಸಮುದಾಯವನ್ನು ಕಟ್ಟಬೇಕಾದ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

4 (1)

1 (1)

2

ಆರೋಗ್ಯ ಸಚಿವ ಯುಟಿ.ಖಾದರ್ ಮಾತನಾಡಿ, ಮಂತ್ರಿಗಳು, ಸಂಸದರು ಪಾರ್ಲಿಮೆಂಟ್ ನಲ್ಲಿ ವಧಾನಸಭೆಯಲ್ಲಿ ಎಸಿ ರೂಮಿನಲ್ಲಿ ಕೂತಮಾತ್ರಕ್ಕೆ ಭಾರತ ದೇಶ ಬಲಿಷ್ಟವಾಗುವುದಿಲ್ಲ, ಇದು ಆಗಬೇಕಾದರೆ ಬೇಕಾದರೆ ತರಗತಿ ಕೊಠಡಿಗಳಲ್ಲಿ ಹಾಗೂ ಕೀಡಾಂಗಣದಲ್ಲಿ ಆಡುವ ಮಕ್ಕಳು ಬಲಿಷ್ಠರಾಗಬೇಕು, ಆ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ವಿದ್ಯಾರ್ಥಿಗಳು ಗುರುವೃಂದಕ್ಕೆ ಗೌರವ ನೀಡುವ ಪರಿಪಾಠ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ತಿಗಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಜವಬ್ದರಾರಿ ಪಾಲಕರ ಮೇಲಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಮೌಲ್ಯವನ್ನು ಉಳಿಸಿಕೊಳ್ಳಬೇಕು. ವ್ಯಾಪಾರೀಕರಣದ ಮೂಲಕ ತನ್ನ ಪಾವಿತ್ರತೆಯನ್ನು ಕಳೆದುಕೊಳ್ಳಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಆಶಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಕಾರ್ಖಾನೆಯಾಗದಂತೆ ಪ್ರಜ್ಞಾವಂತ ಸಮುದಾಯ ಎಚ್ಚರವಹಿಸ ಬೇಕು ಎಂದು ಕರೆನೀಡಿದರು.
ಪ್ರಾಥಮಿಕ ಶಿಕ್ಷಣ ಯಾವುದೇ ಮಾಧ್ಯಮವೇ ಇರಲಿ, ಅದು ಸೋಲಬಾರದು.
ಕಾಲವನ್ನು ಅರ್ಥ ಮಾಡಿಕೊಂಡು ಸರಿಯಾದ ನ್ಯಾಯ ಕೊಟ್ಟರೆ ನಾಣ್ಯ ಚಲಾವಣೆಯುಳ್ಳ ನಾಣ್ಯಗಳಾಗುತ್ತೇವೆ ಎಂದ ಅವರು, ಸಕಾರಾತ್ಮಕ ಚಿಂತನೆಗಳು ನಮ್ಮೊಳಗಿನ ಮಾಧ್ಯಮಗಳ ಗೊಂದಲಗಳನ್ನು ತಿಳಿಗೊಳಿಸುತ್ತದೆ ಎಂದರು. ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸಿ ಅವರನ್ನು ದೇಶದ ಸಂಪತ್ತನ್ನಾಗಿ ರೂಪಿಸಿ ಯಾವತ್ತಿಗೂ ಮಕ್ಕಳನ್ನು ಅಪಾಯಕಾರಿಯನ್ನಾಗಿಸ ಬೇಡಿ ಎಂದು ಸಲಹೆ ನೀಡಿದ ಅವರು ವಿದ್ಯೆ ನೀಡುವ ಜೊತೆಯಲ್ಲಿ ಮನಸ್ಸನ್ನು ಕಟ್ಟುವ ಕೆಲಸದಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಲಿ. ಶಿಕ್ಷಕರು ಬದಲಾವಣೆಗೆ ಹೊಂದದೇ ಇರುವುದರಿಂದ ಖಾಸಗಿ ಟ್ಯೂಷನ್ ಸಂಸ್ಥೆಗಳು ಹುಟ್ಟಿಕೊಂಡಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್. ಸಂತೋಷ್ ಕುಮಾರ್ ರೈ, ಚೆನ್ನಪ್ಪ ಕೋಟ್ಯಾನ್, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ವಿನಯ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಂಟ್ವಾಳ ತಾಲೂಕು ಶಿಕ್ಷಕ ದಿನಾಚರಣಾ ಸಮಿತಿ ಅಧ್ಯಕ್ಷ ಸಿಪ್ರಿಯಾನ್ ಮಿರಾಂದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರೋಟರಿ ಕ್ಲಬ್ ನ ಅಧ್ಯಕ್ಷ ಕರುಣಾಕರ ರೈ, ಕಾರ್ಯದರ್ಶಿ ರಿತೇಶ್ ಬಾಳಿಗ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಮಚಂದ್ರರಾವ್, ಕ್ಷೇತ ಸಂಪನ್ಮೂಲ ಕೇಂದ್ರದ ಸಮನ್ವಯಾದಿಕಾರಿ ರಾಜೇಶ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ ವೇದಿಕೆಯಲ್ಲಿದ್ದರು.
ಪ್ರಶಸ್ತಿ ವಿಜೇತ ಶಿಕ್ಷಕರಾದ ರಮೇಶ್ ನಾಯಕ್ ರಾಯಿ, ಕೆ.ಜಿ. ಸುಬ್ರಹ್ಮಣ್ಯ ಭಟ್, ಶಾರದಾ ರಾವ್ ರವರನ್ನು ಸಚಿವರು ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿದರು. ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಣ ಸಂಯೋಜಕರಾದ ಸುಜಾತ ಕುಮಾರಿ, ಸುಜಾತ ಆರ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ್ ಬಾಗೇವಾಡಿ, ಶ್ರೀಕಾಂತ್ ಸಹಕರಿಸಿದರು.
ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಶಿಕ್ಷಕರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *