3 ಬಜ್ಪೆ 3: ಕಳೆದ ಎಪ್ರಿಲ್ನಲ್ಲಿ ಪೈಪ್ಲೈನ್ ಹಾದುಹೋಗಲೆಂದು ಕಂಬುಲದ ಗದ್ದೆಗೆ ತೋಡು ಮಾಡಿರುವುದು
3 ಬಜ್ಪೆ 4: ಬೃಹತಾಕಾರದ ಕಂಬುಲದ ಗದ್ದೆ
3 ಬಜ್ಪೆ 5: ಕಂಬುಲದ ಗದ್ದೆಯಲ್ಲಿ ಹಾಳಾಗಿ ಬಿದ್ದಿರುವ ಬುಲ್ಡೋಝರ್ ವಾಹನ
ಬಜ್ಪೆ: ಮಳಲಿಯಿಂದ ಸುರತ್ಕಲ್ಗೆ ಹಾದು ಹೋದ ಎಚ್ಪಿಸಿಎಲ್ ಪೈಪ್ಲೈನ್ ಕಾಮಗಾರಿಯಿಂದಾಗಿ ಈ ಬಾರಿ ಮಳಲಿಯ ಉಳಿಪಾಡಿಗುತ್ತುವಿನಲ್ಲಿ ನಡೆಯಲಿರುವ ಕಂಬುಲಕ್ಕೆ ಗ್ರಹಣ ಬಂದೊದಗುವ ಭೀತಿ ಬಂದೊದಗಿದೆ.
ಯಾಕೆಂದರೆ ಎಚ್ಪಿಸಿಎಲ್ ಪೈಪ್ಲೈನ್ ಉಳಿಪಾಡಿಗುತ್ತುವಿನ ಕಂಬುಲದ ಗದ್ದೆಯಲ್ಲೇ ಹಾದುಹೋಗಿರುವುದು ಈ ಭೀತಿಗೆ ಕಾರಣವಾಗಿದೆ.
ಕಳೆದ ಎಪ್ರಿಲ್ನಲ್ಲಿ ಪೈಪ್ಲೈನ್ ಹಾದುಹೋದಲೆಂದು ಇಲ್ಲಿನ ಅನೇಕ ಗದ್ದೆಗಳನ್ನು ಹೂಳಲಾಗಿತ್ತು. ಆದರೆ ಕಂಪನಿಯ ನಿರ್ಲಕ್ಷ್ಯದಿಂದ ಪೈಪ್ಲೈನ್ ಹಾದುಹೋದ ತೋಡನ್ನು ಸಮರ್ಪಕವಾಗಿ ಮುಚ್ಚಿಲ್ಲ. ಇದರಿಂದಾಗಿ ಕೃಷಿಗೆ ತಾಪತ್ರಯ ಬಂದೊದಗಿದೆ. ಈ ಭಾಗದ ಜನರ ಮುಖ್ಯ ಉದ್ಯೋಗ ಕೃಷಿಯಾಗಿದ್ದು, ಕಂಪೆನಿಯ ದಿವ್ಯ ನಿರ್ಲಕ್ಷ್ಯದಿಂದ ಕೃಷಿಗೆ ಕಲ್ಲು ಬಿದ್ದಿದೆ.

ಇದಲ್ಲದೆ ಉಳಿಪಾಡಿಗುತ್ತಿವಿನಿಂದ ಕೊಲ್ಲಬೆಟ್ಟು ಎಂಬಲ್ಲಿಗೆ ಸಂಪಕರ್ಿಸುವ ಭಾಗದಲ್ಲಿ ಬೃಹತ್ ಆದ ತೋಡೊಂದಿದ್ದು ಕಂಪೆನಿ ಇದನ್ನು ಮುಚ್ಚಲು ಹೋಗಿಲ್ಲ. ಇದರಿಂದಾಗಿ ಜೋರು ಮಳೆ ಬಂದರೆ ನೆರೆ ನೆರೆ ನೀರು ಕೃಷಿಗದ್ದೆಗೆ ಬಂದು ಬೀಳುತ್ತದೆ. ಇದರಿಂದಾಗಿ ಹಲವಾರು ಮನೆಯವರು ಕೃಷಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ.
ಇದಕ್ಕಿಂತಲೂ ಮುಖ್ಯವಾಗಿ ಮಳಲಿಯ ಉಳಿಪಾಡಿ ಗುತ್ತು ಎಂಬ ಗುತ್ತಿನ ಮನೆಯವರು ಹಾಗೂ ಊರವರು ಸೇರಿಕೊಂಡು ಉಳಿಪಾಡಿಗುತ್ತು ಮನೆಯ ಸಮೀಪ ಇರುವ ಬೃಹತ್ ಗದ್ದೆಯಲ್ಲಿ ಕಂಬುಲ ಆಚರಿಸಿಕೊಂಡು ಬರುತ್ತಿದ್ದರು. ಇದನ್ನು ಇಲ್ಲೇ ಸಮೀಪದಲ್ಲಿರುವ ಬಬ್ಬು ದೈವ ಸಂಪ್ರೀತವಾಗಲೆಂದು ಹಲವಾರು ವರ್ಷಗಳಿಂದ ಊರವರು ಕಂಬುಲ ಆಚರಿಸಿಕೊಂಡು ಬರುತ್ತಿದ್ದರು. ಬಾಳೆಗಿಡ ನೆಟ್ಟು ಸಂಪ್ರದಾಯ ಪ್ರಕಾರ ವಿಧಿವಿಧಾನಗಳನ್ನು ಮುಗಿಸಿ ಊರ ಗಂಡಸರು ಹಾಗೂ ಮಹಿಳೆಯರು ನೇಜಿನೆಡುತ್ತಿರುವುದು ಇಲ್ಲಿನ ಸಂಪ್ರದಾಯ. ಮಧ್ಯಾಹ್ನ ಸ್ಥಳೀರೆಲ್ಲರೂ ಊಟ ಮಾಡಿಕೊಂಡು ತೆರಳುತ್ತಿದ್ದು ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಿದ್ದರು.
ಆದರೆ ಈ ಬಾರಿ ಕಂಬು ಆಚರಿಸಲಿದ್ದರೂ ಪೈಪ್ಲೈನ್ ಗುಂಡಿಯಿಂದ ಕಂಬುಲಕ್ಕೆ ಗ್ರಹಣ ಬಡಿಯುವ ಕಾಲ ಒದಗಿ ಬಂದಿದೆ. ಅಲ್ಲದೆ ಇದೇ ಗದ್ದೆಯಲ್ಲಿ ಪೈಪ್ಲೈನ್ ಕಾಮಗಾರಿಗೆ ಬಳಸಲಾಗಿದ್ದ ಬುಲ್ಡೋಝರ್ ವಾಹನ ನೆಲದಲ್ಲಿ ಹೂತುಹೋಗಿದೆ. ತೋಡಿನ ಮಣ್ಣನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ನೆಲ ಹೂತು ಹೋಗುತ್ತದೆ. ಇದೆಲ್ಲಾ ತಲೆಬಿಸಿಗೆ ಕಾರಣವಾಗಿದೆ
