ಕೈಕಂಬ: ಗಂಜಿಮಠ ರಾಜ್ ಆಕಾಡೆಮಿ ಶಾಲಾ ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರ ತಂಡವು 2015ನೇ ಆ.16 ಮತ್ತು 17ರಂದು ಗುಲ್ಬರ್ಗಾದ ಚಿತ್ರಾಪುರದ, ವಿದ್ಯಾಭಾರತಿಯಲ್ಲಿ ನಡೆದಂತಹ ರಾಜ್ಯ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ ಅಕಾಡೆಮಿ-ಸಿ.ಬಿ.ಎಸ್.ಸಿ., ಗಂಜಿಮಠದ ಕ್ರೀಡಪಟುಗಳು ವಿಜೇತರಾಗಿದ್ದು, ಕೇರಳದ ಕೋಜಿಕೋಡ್‍ನಲ್ಲಿ ನಡೆಯುವಂತಹ ವಲಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಈ ಕ್ರೀಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸುವವರು-
ಶಾಲಾ ಆಡಳಿತ ವರ್ಗ, ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ಪೋಷಕರು ಮತ್ತು ಹಿತೈಶಿಗಳು.
