ಮುಂಬಯಿ, ಸೆ.02: ಅಖಿಲ ಭಾರತ ತುಳು ಒಕ್ಕೂಟ (ರಿ.) ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಯಕ್ಷ ತುಳು ಪರ್ಬ ಸಮಿತಿಯು ಮುಂಬಯಿ ಮತ್ತು ನವಿ ಮುಂಬಯಿ ನಗರದಾದ್ಯಂತ ಸೆ.07ರ ತನಕ ಆಯೋಜಿಸಿರುವ ತುಳು ಯಕ್ಷಗಾನ ಸಪ್ತಾಹಕ್ಕೆ (ಮುಂಬಾಯಿಡ್ ತುಳು ಯಕ್ಷಗಾನ ಪರ್ಬ) ಕಳೆದ ಮಂಗಳವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಡಾ|ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಉದ್ಘಾಟಿಸಲ್ಪಟ್ಟಿತು.
Yakshagana -2

Yakshagana -1
ಕರ್ನಾಟಕ ಸಂಘ ಮುಂಬಯಿ ಇದರ ಸಹಯೋಗದೊಂದಿಗೆ ಇಂದಿಲ್ಲಿ ಆಯೋಜಿಸಲಾಗಿದ್ದ ತುಳು ಯಕ್ಷಗಾನ ಸಪ್ತಾಹಾ ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಕನರ್ಿರೆ ವಿಶ್ವನಾಥ ಶೆಟ್ಟಿಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ತುಳು ಯಕ್ಷಗಾನ ಸಪ್ತಾಹಕ್ಕೆ ಚಾಲನೆಯನ್ನಿತ್ತರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್, ಜಿ.ಟಿ
ಆಚಾರ್ಯ, ಪೊಲ್ಯ ಉಮೇಶ್ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಕರ್ನೂರು ಮೋಹನ್ ರೈ ಉಪಸ್ಥಿತರಿದ್ದರು.ಕಾರ್ಯಕ್ರಮದ ಮೊದವ ಪ್ರಯೋಗವನ್ನಾಗಿಸಿ `ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರಸಂಗ ಪ್ರದರ್ಶೀಸಲ್ಪಟ್ಟಿತು

By suddi9

Leave a Reply

Your email address will not be published. Required fields are marked *