ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ, ಜಕ್ರಿಬೆಟ್ಟು ಬಂಟ್ವಾಳ ಇದರ 12ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಯು ಇತ್ತೀಚೆಗೆ ಜರಗಿತು. ಸೆ.17 ರಿಂದ ಸೆ.21ರ ತನಕ 5ದಿನಗಳ ಕಾಲ ನಡೆಯಲಿರುವ ಈ ಉತ್ಸವದ ಯಶಸ್ಸಿಗೆ ಸಮಿತಿಯ ಗೌರವಾಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಅರಣ್ಯ ಸಚಿವ ಬಿ.ರಮಾನಾಥ ರೈ ಎಲ್ಲರ ಸಹಕಾರ ಕೋರಿದರು. ಸಭೆಯಲ್ಲಿ ಉತ್ಸವದ ಯಶಸ್ಸಿಗೆ ಅನುಕೂಲವಾಗುವಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳ ಹಂಚಿಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ವಸಂತಿ ಚಂದಪ್ಪ, ಯಾಸ್ಮಿನ್, ರಘುನಾಥ ಪಯ್ಯಡೆ, ಬಿ.ಎಚ್.ಖಾದರ್, ಪಿಯೂಸ್ ರೊಡ್ರಿಗಸ್, ಬೇಬಿಕುಂದರ್ ಶ್ರೀಧರ್ ಪೈ, ಸದಾಶಿವ ಬಂಗೇರ ಜಗದೀಶ್ ಕುಂದರ್, ಪ್ರವೀಣ್ ಬಿ. ಜಕ್ರಿಬೆಟ್ಟು, ರಾಮಕೃಷ್ಣ ಆಳ್ವ, ಪ್ರಶಾಂತ್ ಕುಲಾಲ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಯತೀಶ್ ಶೆಟ್ಟಿ, ದಿನೇಶ್‍ಶಾಂತಿ ಕುಕ್ಕಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿ ವಂದಿಸಿದರು.
