ವಾಮಂಜೂರು: ಕೆಥೊಲಿಕ್ ಸಭಾ ವಾಮಂಜೂರು ಘಟಕದ ವತಿಯಿಂದ ಕಾರ್ಮಿಕ ಸಂತ ಜೋಸೇಫರ ದೇವಾಲಯದ ಮಂಟಪದಲ್ಲಿ ಅಗೋಸ್ತ್ 30 ರಂದು ಆದಿತ್ಯವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಹಾಗೂ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕಾರ್ಯದ ಅಧ್ಯಕ್ಷರಾಗಿ ವಂದನೀಯ ಧರ್ಮಗುರು ಫಾ1 ಸಿಪ್ರಿಯನ್ ಪಿಂಟೊ, ಮುಖ್ಯ ಅತಿಥಿಯಾಗಿ ಸೈಂಟ್ ಲೋರೆನ್ಸ್ ಬೋಂದೆಲ್ ಶಾಲೆಯ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಮೋನಿಕ ಪಿಂಟೊ, ಕೆಥೊಲಿಕ್ ಸಭಾ ವಾರ್ಡಿನ ಅಧ್ಯಕ್ಷೆ ಶ್ರೀಮತಿ ಅಸುಂತಾ ಕ್ರಾಸ್ತಾ ವೇದಿಕೆಯಲ್ಲಿದ್ದರು. ಕೆಥೊಲಿಕ್ ಸಭಾ ಅಧ್ಯಕ್ಷರಾದ ಮಾರ್ಟಿನ್ ಆರ್ ಡಿ’ಸೋಜ ಸ್ವಾಗತಿಸಿದರು.


ಮುಖ್ಯ ಅತಿಥಿಯವರು ಶಿಕ್ಷಕರನ್ನು ಉದ್ದೇಶಿಸಿ ಶಿಕ್ಷಕರು ತಿದ್ದಿ ಬುದ್ಧಿ ಹೇಳಿ ಕುಂಬಾರನು ಹೇಗೆ ಮಣ್ಣಿನ ಮುದ್ದೆಯನ್ನು ಹದ ಮಾಡಿ ಆಕಾರ ಕೊಡುತ್ತಾರೊ ಅದೇ ರೀತಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕೊಟ್ಟು ನಮ್ಮ ದೇಶದ ಹಾಗೂ ರಾಷ್ಟ್ರದ ಉತ್ತಮ ಪ್ರಜೆಯನ್ನಾಗಿ ಮಾಡುತ್ತಾರೆ ಎಂದು ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 70 ಶಿಕ್ಷಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ರೀನಾ ಡಿಸೋಜ ಅತ್ಯುತ್ತಮ ಶಿಕ್ಷಕಿ, ಕೊಂಕಣಿ ಸ್ಟಾರ್ ಹಾಗು ಸ್ಕೌಟ್ ಗೈಡ್ಸ್‍ನಲ್ಲಿ 2015 ರಲ್ಲಿ ರಾಜ್ಯಸರ್ಕಾರದಿಂದ ಪುಸ್ಕ್ರತರಾಗಿರುತ್ತಾರೆ. ಹಾಗು ಲಿಡ್ವಿನ್ ಕ್ರಾಸ್ತ, ಎಮ್ ಕೋಮ್ ಹಾಗೂ ಎಂ, ಫಿಲ್ ಪದವಿಯಲ್ಲಿ 2015ರಲ್ಲಿ ಬಂಗಾರದ ಪದಕವನ್ನು ಪಡೆದಿದ್ದಾರೆ. ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷರ ಭಾಷಣದಲ್ಲಿ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ತಾವೇ ಸಕ್ರಿಯವಾಗಿ ಭಾಗವಹಿಸಿ ಇತರರಿಗೆ ಒಳ್ಳೆಯ ಆದರ್ಶರಾಗಬೇಕೆಂದು ಸಂದೇಶ ನೀಡಿದರು. ಉಪಾಧ್ಯಕ್ಷ ಡೇನಿಸ್ ಡಿಸೋಜ, ಮೋಲಿ ಕುವೆಲ್ಲೊ ಉಪಸ್ಥಿತರಿದ್ದು. ಕಾರ್ಯದರ್ಶಿ ಝೀನಾ ಫೆರ್ನಾಂಡಿಸ್ ಧನ್ಯವಾದ ಅರ್ಪಿಸಿದರು.







