ಬಂಟ್ವಾಳ: ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಹಾಗೂ ತೆಂಗು ಉತ್ಪಾದಕರ ಫೆಡರೇಶನ್ ವತಿಯಿಂದ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನೀರಾ ಟೆಕ್ನಿಷನ್ ತರಬೇತಿಗಾಗಿ ಫೆಡರೇಶನ್ನ ಸದಸ್ಯರನ್ನು ಕೇರಳದ ಕೊಚ್ಚಿಗೆ ಭಾನುವಾರ ಸಂಜೆ ಕಳುಹಿಸಿ ಕೊಡಲಾಯಿತು.

ಕೊಚ್ಚಿಯ ಕೀನ್ಪುರಂ ಸೌತ್ ವಝಾಕಲಿಮ್ ಆಳುವ ಇಲ್ಲಿನ ಟೆಕ್ನಾಲಜಿ ಡೆವಲಪ್ಮೆಂಟ್ ಸೆಂಟರ್ ಸಿಐಟಿ ಕಾಕನೆಟ್ ಡೆವಲಫ್ಮೆಂಟ್ ಬೋರ್ಡಿನಲ್ಲಿ ಇವರು ಹದಿನೈದು ದಿನಗಳ ತರಬೇತಿ ಪಡೆದು ವಾಪಸ್ಸಾಗಲಿದ್ದಾರೆ. ಫೆಡರೇಶನ್ ಸದಸ್ಯರಾದ ಬಾಲಕೃಷ್ಣ ಬೊಂಡಾಲ, ಕೃಷ್ಣಪ್ಪ ಬೋಳಂತೂರು, ವಿಶ್ವನಾಥ ಗುಡ್ಡೆಬಳ್ಳಿ, ಉವಪ್ಪ ಬೋಳಂತೂರು, , ಪೂವಪ್ಪ ಶಂಕರ ಕೋಡಿ, ರಾಜೇಶ್ ಏಳ್ತಿಮಾರ್, ಗಿರೀಶ್ ಬೋರುಗುಡ್ಡೆ, ಚಂದ್ರಶೇಖರ ಇವರನ್ನು ತರಬೇತಿಗೆ ಕಳುಹಿಸಿ ಕೊಡಲಾಯಿತು.
ಪುರಸಭಾ ಮಾಜಿ ಸದಸ್ಯ ಗೋಪಾಲ ಸುವರ್ಣ ಹಸಿರು ನಿಶಾನೆ ತೋರಿದರು. ಈ ಸಂದರ್ಭ ಫೆಡರೇಶನ್ ಅಧ್ಯಕ್ಷ ಮಾಧವ ಕೆ.ಕರ್ಬೆಟ್ಟು, ಕಾರ್ಯದರ್ಶಿ ಜನಾರ್ಧನ ಕುಲಾಲ್ ಬೊಂಡಾಲ, ಕೋಶಾಧಿಕಾರಿ ಮನೋಹರ ಶೆಟ್ಟಿ, ಜತೆಕಾರ್ಯದರ್ಶಿ ದಿವಾಕರ ಶಂಭೂರು, ಬಾಲಕೃಷ್ಣ ಹೊಳ್ಳ, ಉಪಾಧ್ಯಕ್ಷ ಪ್ರದೀಪ್ ಮಾರ್ಲ ಕುರಿಯಾಳ, ಲೋಹಿತಾಕ್ಷ ಬೆರ್ಕಳ, ಕೃಷ್ಣಪ್ಪ ನಾೈಕ ಶಂಭೂರು, ಸಂಘಟನಾ ಕಾರ್ಯದರ್ಶಿ ಶ್ರೀಶ ರಾಯಸ, ಶಂಭೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಕಾರ್ಯದರ್ಶಿ ಯೋಗೀಶ್ ಅಮೀನ್, ನಿರ್ದೇಶಕ ಅಶೋಕ ಶಂಭೂರು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ ಅಂತರ, ನರಿಕೊಂಬು ಯುವವಾಹಿನಿ ಘಟಕದ ಕಾರ್ಯದರ್ಶಿ ವಾಮನ ಕರ್ಬೇಟ್ಟು ಹಾಜರಿದ್ದರು.
