ಸುಳ್ಯ: ಕಾಲೇಜು ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಯೋರ್ವ ಕಿಸ್ ನೀಡಿ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿ ಯುವಕ ಮತ್ತು ಯುವತಿಯನ್ನು ಪ್ರಾಂಶುಪಾಲರು ಕಾಲೇಜಿನಿಂದ 15 ದಿನಗಳ ವರೆಗೆ ಡಿಬಾರ್ ಮಾಡಿದ್ದಾರೆ.
IMG-20150827-WA0061

IMG-20150827-WA0053
ಘಟನೆಗೆ ಸಂಬಂಧಿಸಿದಂತೆ ಇಂದು ಪ್ರಾಂಶುಪಾಲರು ಘಟನೆಗೆ ಕಾರಣರಾದ ಯುವಕ- ಯುವತಿಯ ಪೋಷಕರನ್ನು ಕರೆದು ವಿಚಾರಗಳನ್ನು ತಿಳಿಸಿದರು. ಸುದಿರ್ಘ ಮಾತುಕತೆಯ ನಂತರ ಇಬ್ಬರನ್ನೂ 15 ದಿನಗಳ ಮಟ್ಟಿಗೆ ಡಿಬಾರ್ ಮಾಡುವ ತೀರ್ಮಾನಕ್ಕೆ ಬಂದರು ನಂತರ ಎಬಿವಿಪಿ ನಾಯಕರನ್ನು ಕರೆಸಿ ವಿದ್ಯಾರ್ಥಿ ನಾಯಕರೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿಗಳಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ಸೂಚಿಸಿದರು.
15 ದಿನದ ನಂತರ ಕಾಲೇಜಿಗೆ ಬಂದ ಮೇಲೂ ವಿದ್ಯಾರ್ಥಿಗಳು ಇದೇ ರೀತಿಯ ವರ್ತನೆ ಪುನರಾವರ್ತನೆ ಆದರೆ ಉಗ್ರ ರೀತಿಯ ಪ್ರತಿಭಟನೆ ಮಾಡುವುದಾಗಿ ಎಬಿವಿಪಿ ತಿಳಿಸಿದೆ.
ಪೋಲಿಸ್ ಸಿಬ್ಬಂಧಿಗಳ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಬಂದೋಬಸ್ತು ಮಾಡಲಾಗಿತ್ತು.

By suddi9

Leave a Reply

Your email address will not be published. Required fields are marked *