ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 58ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಇದೇ ಆ.30ರ ಆದಿತ್ಯವಾರ ಸಂಜೆ 4:30 ಗಂಟೆಗೆ
ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಲಿದೆ.

1-L.V. Amin
3-Sujata Shettyಮಹಾಸಭೆಯಲ್ಲಿ ಸಂಘವು ವಾರ್ಷಿಕವಾಗಿ ನೀಡುವ ವಿದ್ಯಾರ್ಥಿ ವೇತನ-2015ರ ವಿತರಣೆ ದತ್ತು ಸ್ವೀಕೃತ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಾರ್ಷಿಕ ಸಹಾಯನಿಧಿ ವಿತರಿಸಲಾಗುವುದು. ಫಲಾನುಭವಿ ವಿದ್ಯಾರ್ಥಿಗಳು ತಮ್ಮ ಪೋಷಕರನ್ನೊಳಗೊಂಡು ಆಗಮಿಸಬೇಕು ಮತ್ತು ಸಂಘದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯ ಯಶಸ್ವಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಶ್ರೀಮತಿ ಸುಜತಾ ಶೆಟ್ಟಿ ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *