ಎಡಪದವು: ಶಾಸ್ತಾವು ಶ್ರೀ ಭೂತನಾಥೇಶ್ವರ ಪರಿಸರದ ಮತ್ತು ಪೂಪಾಡಿಕಲ್ಲಿನ ಯುವಕರು ಬೈತರಿ ಹಾಗೂ ಪೂಪಾಡಿಕಲ್ಲಿಗೆ ಹೋಗುವ ಕಾಲು ದಾರಿಯನ್ನು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಹೋಗಲು ಅನುಕೂಲವಾಗುವಂತೆ ಮಾಡಿದರು.
ಸೂಕ್ತಕಾಲುದಾರಿ ಹಾಗೂ ಸ್ವಚ್ಚತೆಯನ್ನು ಇಲ್ಲಿನ ಯುವಕರು ಸೇರಿ ಮಾಡಿದರು. ಮಂಗಳೂರು ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ಪ್ರಕಾಶ್ ಗೌಡ ಇದರ ಮುಂದಾಳ್ವತ್ವದಲ್ಲಿ ಇಲ್ಲಿಯ ಸ್ಥಳೀಯರಾದ ಹರೀಶ್, ಜಗದೀಶ್, ಸತೀಶ್, ರಾಜೇಶ್ ನಾಯ್ಕ, ವಿಜಯ ನಾಯ್ಕ ಲೋಕಯ್ಯಗೌಡ, ಹಿಮಕರ , ತಾರತಾನಾಥ, ಗುಣಪಾಲ, ಮೋಹನ ಮತ್ತಿತರರು ಉಪಸ್ಥಿತರಿದ್ದರು.




