ಬಂಟ್ವಾಳ,ಆಗಸ್ಟ್ 18: ಜಗತ್ತು ಭಾರತದ ಸಂಸ್ಕಾರದತ್ತ ದೃಷ್ಟಿ ಹಾಯಿಸಿದೆ, ಸಂಸ್ಕಾರವನ್ನು ಮಕ್ಕಳಲ್ಲಿ ಮೂಡಿಸುವುದಕ್ಕಾಗಿ ಶ್ರೀರಾಮ ವಿದ್ಯಾಲಯ ಸತತ ಪ್ರಯತ್ನ ಮಾಡುತ್ತಿದೆ, ವಿದ್ಯಾಲಯದಲ್ಲಿ ಪಡೆದ ಸಂಸ್ಕಾರವನ್ನು ಮನೆಯಲ್ಲೂ ಮುಂದುವರೆಸಲು ಪೋಷಕರ ಪ್ರೋತ್ಸಾಹ ಅಗತ್ಯ, ಇದರಿಂದ ಮಕ್ಕಳ ಅದ್ಭುತ ಯಶಸ್ಸು ಖಂಡಿತ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು. ಇವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪಾಲಕರ ಸಮಾವೇಶದಲ್ಲಿ ಪಾಲಕರನ್ನುದ್ದೇಶಿಸಿ ಮಾತನಾಡಿದರು.

DSCN0415
ಕಾರ್ಯಕ್ರಮದಲ್ಲಿ ಪೊಳಲಿ ತಪೋವನದ ಶ್ರೀವಿವೇಕ ಚೈತನ್ಯಾನಂದ ಜೀ, ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿವರ್ಾಹಣಾಧಿಕಾರಿ ಶ್ರೀ ವಸಂತ ಮಾಧವ ಹಾಗೂ ಪ್ರಾಚಾರ್ಯ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ವಿದ್ಯಾಥರ್ಿಗಳ ಸಮಗ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಕುಂದುಕೊರತಗಳ ಬಗ್ಗೆ, ಸಂಸ್ಥೆಯ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಪೋಷಕರು ಚಚರ್ಿಸಿದರು.
ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾಥರ್ಿನಿ ವಾಸವಿ ಪ್ರಾಥರ್ಿಸಿದರು, ಪ್ರಾಚಾರ್ಯ ವಸಂತ ಬಲ್ಲಾಳ್ ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ಶ್ರೀಮತಿ ಶೋಭಾ ವಿ. ಶೆಟ್ಟಿ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಕ್ಷತ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *