ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇಲ್ಲಿನ ಪುರಸಭಾ ಸದಸ್ಯೆಯನ್ನು ಅವಮಾನಗೊಳಿಸಿದ ಬಗ್ಗೆ ಪುರಸಭಾ ಸದಸ್ಯೆ ಚಂಚಲಾಕ್ಷಿ ಅವರು ಶಾಲಾ ಮುಖ್ಯ ಶಿಕ್ಷಕಿ ಗೀತಾ ಅವರ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಲಿಖಿತ ದೂರು ನೀಡಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

 

ಪುರಸಭೆಸದಸ್ಯೆ   ಚಂಚಲಾಕ್ಷೀ                                                        ಶಿಕ್ಷಕಿ  ಗೀತಾ

geetha
ಪಾಣೆಮಂಗಳೂರು ಮುಖ್ಯ ಪೇಟೆಯಲ್ಲಿರುವ ಸರಕಾರಿ ಶಾಲೆಯು ನನ್ನ ವಾರ್ಡ್ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ನಡೆಯುತ್ತಿರುವ ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೂ ಆಹ್ವಾನಿಸದೆ ಕಡೆಗಣಿಸುವ ಮೂಲಕ ಶಿಕ್ಷಕಿ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಅಲ್ಲದೆ ಕಳೆದ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣಕ್ಕೂ ನನ್ನನ್ನು ಆಹ್ವಾನಿಸಿ ಧ್ವಜಾರೋಹಣದ ಅರ್ಹ ಅವಕಾಶವನ್ನು ನನ್ನಿಂದ ಕಸಿದುಕೊಂಡು ಯಾವುದೋ ಪಂಚಾಯತ್ ವ್ಯಾಪ್ತಿಗೊಳಪಟ್ಟ ವ್ಯಕ್ತಿಯೋರ್ವರಿಗೆ ನೀಡುವ ಮೂಲಕ ಸಾರ್ವಜನಿಕವಾಗಿ ನನ್ನನ್ನು ಅವಮಾನಿಸಿರುತ್ತಾರೆ. ಶಿಕ್ಷಣಾಧಿಕಾರಿಗಳು ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ತತರ್ು ಕ್ರಮ ಜರುಗಿಸುವಂತೆ ಚಂಚಲಾಕ್ಷಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಅವರಿಗೆ ನೀಡಿರುವ ಲಿಖಿತ ದೂರಿನಲ್ಲಿ ಆಗ್ರಹಿಸಿದ್ದಾರೆ.
ಸಾರ್ವಜನಿಕರಿಂದಲೂ ದೂರು
ಈ ಬಗ್ಗೆ ಪಾಣೆಮಂಗಳೂರು ನಾಗರಿಕರೂ ಕೂಡ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದು, ಪುರಸಭಾ ಜನಪ್ರತಿನಿಧಿಯನ್ನು ರಾಷ್ಟ್ರೀಯ ಹಬ್ಬ ಆಚರಣೆ ಸಂದರ್ಭ ಸಾರ್ವಜನಿಕವಾಗಿ ಅವಮಾನಿಸಿ ಬೇಜವಾಬ್ದಾರಿ ವರ್ತಿಸಿರುವ ಶಿಕ್ಷಕಿ ವಿರುದ್ದ ಹದಿನೈದು ದಿನಗಳೊಳಗೆ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಶಿಕ್ಷಣಾಧಿಕಾರಿ ಕಛೇರಿ ಮುಂಭಾಗ ಧರಣಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಶಿಕ್ಷಕಿ ವಿರುದ್ದ ಶಿಸ್ತು ಕ್ರಮ : ಶಿಕ್ಷಣಾಧಿಕಾರಿ
ಈ ಬಗ್ಗೆ ಕರಾವಳಿ ಅಲೆಗೆ ಪ್ರತಿಕ್ರಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅವರು ಈ ಬಗ್ಗೆ ಜನಪ್ರತಿನಿಧಿ ಚಂಚಲಾಕ್ಷಿ ಅವರು ಲಿಖಿತ ದೂರು ನೀಡಿದ್ದು, ಪರಿಶೀಲಿಸಲಾಗುವುದು. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿಗೆ ವಿವರ ಕೇಳಿ ಶೀಘ್ರದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷರಿಂದ ಸ್ಪಷ್ಟನೆ
ಘಟನೆಯ ಬಗ್ಗೆ ಪತ್ರಿಕೆಗೆ ಸ್ಪಷ್ಟನೆ ನೀಡಿರುವ ಎಸ್ಡಿಎಂಸಿ ಅಧ್ಯಕ್ಷ ಬಶೀರ್ ನಂದಾವರ ಅವರು ಶಾಲೆಯ ಕೆಲವೊಂದು ಕಾಮಗಾರಿಗಳ ಬಗ್ಗೆ ಕ್ರಮ ಜರುಗಿಸುವಂತೆ ಪುರಸಭಾ ಸದಸ್ಯೆಗೆ ಆಗ್ರಹಿಸಿದ್ದು, ಇದಕ್ಕೆ ಅವರು ಸ್ಪಂದಿಸದ ಹಿನ್ನಲೆಯಲ್ಲಿ ಅವರಿಗೆ ಧ್ವಜಾರೋಹಣ ಅವಕಾಶ ನಿರಾಕರಿಸಿ ಈ ಬಾರಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ ಸಂಘಟನೆಗೆ ಸೇರಿದ ವ್ಯಕ್ತಿಗೆ ಈ ಅವಕಾಶ ನೀಡಲಾಗಿದೆ ಎಂದಿದ್ದಾರೆ.

By Suddi9

Leave a Reply

Your email address will not be published. Required fields are marked *