ಬಂಟ್ವಾಳ : ಮೋಕೆದ ಕಲಾವಿದೆರ್ ಮತ್ತು ತುಳು ನಾಟಕೋತ್ಸವ ಸಮಿತಿ ನೇತೃತ್ವದಲ್ಲಿ ಬಂಟ್ವಾಳ ವಿಎನ್ ಆರ್ ಗೋಲ್ಡ್ ಸಂಸ್ಥೆಯ ವಠಾರದಲ್ಲಿ ನಡೆದ 2ನೇದಿನದ ನಾಟಕೋತ್ಸವ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಶಿವಗಿರಿ ಕಲ್ಲಡ್ಕ ರವರನ್ನು ಚಿತ್ರನಟ ಅರವಿಂದ ಬೋಳಾರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಅಶ್ವನಿ ಕುಮಾರ್ ರೈ, ರೋಟರಿಕ್ಲಬ್ ಅಧ್ಯಕ್ಷ ಕರುಣಾಕರ್ ರೈ, ರೋಟರಿ ಡಾ.ಹರಿಕೃಷ್ಣ ಕಾಮತ್ , ರಂಗನಿರ್ದೇಶಕ ಮಂಜು ವಿಟ್ಲ , ಕಾರ್ಯದರ್ಶಿ ರೋ/ರಿತೇಶ್ ಬಾಳಿಗಾ, ಭೂ ಬ್ಯಾಂಕ್ ಅಧ್ಯಕ್ಷ ,ಸಮಿತಿಯ ಗೌರವಾಧ್ಯಕ್ಷ ಸುದರ್ಶನ್ ಜೈನ್ , ,ಸಮಿತಿಯ ಗೌರವಾಧ್ಯಕ್ಷ ನಾಗೇಂದ್ರ ಬಾಳಿಗಾ , ನಾಟಕೋತ್ಸವ ಸಮಿತಿ ಅಧ್ಯಕ್ಷ ಸುಬಾಶ್ಚಂದ್ರ ಜೈನ್ ಬಂಟ್ವಾಳ , ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ , ನಾರಾಯಣ ಪೆರ್ನೆ ಉಪಸ್ಥಿತರಿದ್ದರು.
