ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ “ನ್ಯಾಯದ ಕಾವಲುಗಳಾಗಿರಿ” ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ತಾಲೂಲಿನಾದ್ಯಂತ 40 ಕಡೆಗಳಲ್ಲಿ ಸ್ವಾತಂತ್ರ್ಯ ಧಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಲ್ಲಡ್ಕದಲ್ಲಿ ನಡೆದ ದ್ವಜಾಹಾರೋಹಣ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಝಕರಿಯ ಕಲ್ಲಡ್ಕ ಮತ್ತು ಪರಂಗಿಪೇಟೆಯಲ್ಲಿ ನಡೆದ ದ್ವಜಾಹಾರೋಹಣ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಸಮಿತಿ ಫ್ರಧಾನ ಕಾರ್ಯದರ್ಶಿ ಸಲೀಮ್ ಪರಂಗಿಪೇಟೆ ದ್ವಜಾರೋಹಣ ಮಾಡಿದರು.
