ಬಂಟ್ವಾಳ: ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ದಾಮಸ್‌ಕಟ್ಟೆಯ ಪರ್ಲ್ ಫ್ರೀಡಾ ಡಿಕೋಸ್ತ ಇವರು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.
ಇವರು ಮಂಗಳೂರಿನ ಸಿಎ ನಿತಿನ್ ಜೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಾಡಿದ್ದಾರೆ. ಇವರು ದಾಮಸ್‌ಕಟ್ಟೆಯ ಶ್ರೀ ಫ್ರಾನ್ಸಿಸ್ ಡಿಕೋಸ್ತ ಹಾಗೂ ಶ್ರೀಮತಿ ಅನಿತಾ ಡಿಕೋಸ್ತ ಇವರ ಪುತ್ರಿ.

