ಬಂಟ್ವಾಳ: ಶಿಬಿರಾರ್ಥಿಗಳು ಒತ್ತಯಪೂರ್ವಕವಾಗಿ ಶಿಬಿರದಲ್ಲಿ ಭಾಗವಹಿಸಿದ್ದಿರಬಹುದು. ಆದರೆ ಎಂಟು ದಿನಗಳ ಈ ಕಾರ್ಯಕ್ರಮ ಮುಂದೆ ನಿಮ್ಮ ಬದುಕಿಗೆ ಬೆಳಕು ನೀಡಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿತದ ಚಟ ಬಿಟ್ಟು ಮುಂದೆ ಉತ್ತಮ ಜೀವನ ನಡೆಸುತ್ತೇನೆ ಎನ್ನುವ ದೃಢ ಸಂಕಲ್ಪವನ್ನು ತೊಡಬೇಕು ಎಂದು ಜೆಸಿಐ ಬಂಟ್ವಾಳದ ಅಧ್ಯಕ್ಷ ಲೋಕೇಶ್ ಸುವರ್ಣ ಹೇಳಿದರು.
BTW_AUG12_15ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕಲ್ಲಡ್ಕ ವಲಯ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಾಣೆಮಂಗಳೂರಿನ ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 852ನೇ ಮದ್ಯ ವರ್ಜನ ಶಿಬಿರದ ಬುಧವಾರ ನಡೆದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದಿಂಡಿಕೆರೆ ಶ್ರೀ ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ವಿಠಲ್ ನಾಯ್ಕ್, ಹಜಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್‍ನ ಮಾಲಕ ಮಹಮ್ಮದ್ ಹನೀಫ್, ಗಣೇಶ್ ಮೆಡಿಕಲ್ಸ್‍ನ ವಿನಯ ರೈ, ಬಾಳ್ತಿಲ ಬೀಡು ಬ್ರಿಜೇಶ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ ಉಪಸ್ಥಿತರಿದ್ದರು.
ಹರೀಶ್ ಬಂಗೇರ ಸ್ವಾಗತಿಸಿ, ಸೌಮ್ಯ ವಂದಿಸಿದರು. ಸೇವಾ ಪ್ರತಿನಿಧಿ ಮಾಲತಿ ಕಾರ್ಯಕ್ರಮ ಸಂಯೋಜಿಸಿದರು.

By Suddi9

Leave a Reply

Your email address will not be published. Required fields are marked *