ಬಂಟ್ವಾಳ: ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ, ಕ್ಷೇ.ಧ.ಗ್ರಾ. ಯೋ,(ರಿ.) ಕುಕ್ಕಾಜೆ ಮತ್ತು ಮಂಚಿ ಒಕ್ಕೂಟದ ವತಿಯಿಂದ ಆಟಿ-ತಮ್ಮನ ಲೇಸ್ ಆ.09 ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬಾಬು ಶೆಟ್ಟಿ ಇವರು ತುಳುನಾಡಿನ ಇತಿಹಾಸದಲ್ಲಿ ಆಟಿ ತಿಂಗಳು ತುಳುವರಿಗೆ ಮರೆಯಲಾರದ ಸಂಕಷ್ಟದ ತಿಂಗಳು. ಬಡವನಿಂದ ಶ್ರೀಮಂತರವರೆಗೆ ಎಲ್ಲರಿಗೂ ಉಣ್ಣಲು,ಉಡಲು, ಎಲ್ಲದಕ್ಕೂ ಬರ. ಇಂತಹ ಸಂದರ್ಭದಲ್ಲಿ ಬಡವರು ಹಸಿವಿನ ಪರಿಹಾರಕ್ಕೆ ಕಂಡುಕೊಂಡ ಮಾರ್ಗವೇ ಪ್ರಕೃತಿ ಜನ್ಯ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸುಗಳು. ಇದು ಮುಂದೆ ಗ್ರಾಮೀಣ ಭಾಗದ ಜನರ ಜೀವ ಸತ್ವದ ವಸ್ತುವಾಗಿ ಪರಿಣಮಿಸಿತು. ಆದ್ದರಿಂದಲೇ ನಮ್ಮ ಕಿರಿಯರಿಗೆ ಆಟಿ ತಿಂಗಳನ್ನು ಮತ್ತೆ-ಮತ್ತೆ ನೆನಪಿಸುವ ಕಾರ್ಯವನ್ನು ಮಾಡಬೇಕಾಗಿರುವುದು ಅನಿವಾರ್ಯ ಎಂದರು. ವವೇದಿಕೆಯಲ್ಲಿ ಮಂಚಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಪ್ರಮೀಳ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೇಲ್ವಿಚಾರಕ ನವೀನ್ ಶೆಟ್ಟಿ ಸೇವಾ ಪ್ರತಿನಿಧಿ ಪ್ರಮೀಳಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಕೆ. ಪದ್ಮನಾಭ ಸಾಲ್ಯಾನ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.

By Suddi9

Leave a Reply

Your email address will not be published. Required fields are marked *