ಬಂಟ್ವಾಳ:ಅಗೋಸ್ಟ್  08:  ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಆಟಿಡೊಂಜಿ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಚೆನ್ನಮಣೆ ಆಟದೊಂದಿಗೆ ಪ್ರಾರಂಭವಾದ ಈ ಸರಳ ಸಮಾರಂಭದಲ್ಲಿ ಸ್ಥಳೀಯರಾದ ಸುಶೀಲ ಇವರು ಅಧ್ಯಕ್ಷತೆ ವಹಿಸಿದ್ದರು. ಔಷಧೀಯ ಸಸ್ಯಗಳ ಪ್ರಾತ್ಯಕ್ಷತೆಯನ್ನು ಇಕೋ ಕ್ಲಬ್ನ ಸದಸ್ಯರು ನಡೆಸಿಕೊಟ್ಟರು ಮತ್ತು ಅವುಗಳ ಉಪಯೋಗವನ್ನು ಸುಶೀಲ ತಿಳಿಸಿಕೊಟ್ಟರು. ಸುಮಧುರವಾಗಿ ಪಾಡ್ದಾನವನ್ನು ಹೇಳಿದರು.ಈ ದಿನದ ವಿಶೇಷವಾಗಿ ಶಾಲೆಯಲ್ಲಿ ‘ ಆಟಿದ ವನಸ್’ನ್ನು ಏರ್ಪಡಿಸಲಾಗಿತ್ತು. ಊಟದಲ್ಲಿ ತಜಂಕನಿಂದ ತಯಾರಾದ ಖಾದ್ಯ, ಉಪ್ಪಡಚ್ಚಿಲ್, ತೇರ ಚಟ್ನಿ, ಕುಡು ಚಟ್ನಿ, ತಿಮರೆ ಚಟ್ನಿ, ರಚ್ಚೆ ಚಟ್ನಿ, ಗೂಂಜೆ ಚಟ್ನಿ,ತೇಟ್ಲ, ಪತ್ರೊಡೆ, ಸೇಮೆದಡ್ಯ ಪೇರ್, ಉಪ್ಪಡ್, ಅತರ್ಿಕಾಯಿ ಚಟ್ನಿ, ಕಣಿಲೆ ಅಂಬಡೆ ಗಸಿ, ಚೆಲ್ಲಂಗಾಯಿ ಚಟ್ನಿ,ಕಂಚಲ ಗಸಿ,ಸುರುಳಿ ಪತ್ರೊಡೆ,ಹುರಿದ ಅಕ್ಕಿ ಉಂಡೆ,ಉಪ್ಪುದ ತೌತೆ ಚಟ್ನಿ, ತೇವುದ ಚಟ್ನಿ,ಉಂಡ್ಲುಗ ಇತ್ಯಾದಿಗಳನ್ನು ಉಣಬಡಿಸಲಾಯಿತು.
ವಿದ್ಯಾಥರ್ಿಗಳಿಗೆ ಸಾಂಪ್ರದಾಯದಂತೆ ಬಾಳೆಎಲೆಯಲ್ಲಿ ಭಕ್ಷ್ಯಗಳನ್ನು ಬಡಿಸಲಾಯಿತು.

P9220258

P9220260

P9220262

P9220264

P9220266

P9220268ಸಮಾರಂಭದಲ್ಲಿ ಶಿಕ್ಷಕರಾದ ಉಮಾ, ಪೂಣರ್ಿಮ, ರಂಜಿತಾ, ಸವಿತಾ, ಸತ್ಯಕಿರಣ್ ಕುಮಾರ್, ಮಂಜುಳಾ ಕುಮಾರಿ, ಡಯಾನಾ ವೀಣಾ, ಹೇಮಲತಾ ಉಪಸ್ಥಿತರಿದ್ದರು.
ಕುಮಾರಿ ಶರಣ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.

By Suddi9

Leave a Reply

Your email address will not be published. Required fields are marked *