ಬಂಟ್ವಾಳ, ಆ. 4:ಯಾವುದೇ ಕೃತಿಯನ್ನು ಸಂಪೂರ್ಣ ಓದದೆ ಅದರ ಬಗ್ಗೆ ಪರ ಮತ್ತು ವಿರೋಧ ವ್ಯಕ್ತ ಮಾಡುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಇದಕ್ಕಾಗಿ ನಾವು ಪ್ರತಿಯೊಂದು ಕೃತಿಯನ್ನು ಕೂಡಾ ಅಮೂಲಾಗ್ರ ಓದಿ ತಿಳಿದುಕೊಳ್ಳುವುದು ಅವಶ್ಯ. ತಿಳಿಯದೇ ಇರುವವರು ಜಾತಿ ಮತಗಳ ಯೋಚನೆ ಬರಲಾರದು ಎಂದು ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ತಿಳಿಸಿದರು.
ಅವರು ಆ. 9ರಂದು ಮೆಲ್ಕಾರ್ ಬಿರ್ವ ಅಡಿಟೋರಿಯಂನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯಿಂದ ನೀಡಿದ ವಿಶುಕುಮಾರ್ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಂಪೂರ್ಣ ಕೃತಿ ಓದದವರಿಂದ ವಿಶು ಕುಮಾರ್ ಅವರ ಕರಾವಳಿ ಕೃತಿ ಬಗ್ಗೆ ಮತ್ತು 40 ವರ್ಷಗಳ ಹಿಂದೆ ನಾನು ಬರೆದ ಜಿಹಾದ್ ಕೃತಿ ಬಗ್ಗೆ ಅನಗತ್ಯ ವಿರೋಧ ವಿವಾದ ಉಂಟಾಗಿತ್ತು ಎಂದು ಸ್ಮರಿಸಿದರು. ಮುಸ್ಲಿಂ ಧಾರ್ಮೀಕ ಸಂಸ್ಥೆಗಳು ವರ್ಷಕ್ಕೆ ಸುಮಾರು 30ರಷ್ಟು ಪುಸ್ತಕ ಬಿಡುಗಡೆ ಮಾಡುತ್ತಿದ್ದು ಎಷ್ಟು ಮಂದಿ ಕನ್ನಡಿಗಳು ಮುಕ್ತವಾಗಿ ಆ ಕೃತಿಗಳನ್ನು ಸ್ವೀಕರಿಸಿ ಓದುತ್ತಾರೆ.
ಶೀಘ್ರದಲ್ಲಿ ಪ್ರವಾದಿ ಬಗ್ಗೆ ಐತಿಹಾಸಿಕ ಪುಸ್ತಕವನ್ನು ತಾನು ಬರೆಯಲಿದ್ದು ಅದನ್ನಾದರೂ ಓದುವ ಮೂಲಕ ಕೃತಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು.
ಕನ್ನಡದ ಹಿರಿಯ ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸಾಹಿತಿಗಳಿಗೆ ಕನಸುಗಳೇ ಪ್ರೇರಣೆ, ಬೊಳುವಾರರ ಸಾಹಿತ್ಯ ವೈಚಾರಿಕ ದೃಷ್ಟಿಕೋನಗಳಿಂದ ಕೂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಹಿರಿಯ ಸಾಹಿತಿ ನಾಟಕಕರ್ತರಾದ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ ಮಾತನಾಡಿ ತುಳು ಭಾಷೆಗೆ ಪ್ರಾಚೀನ ಇತಿಹಾಸಕಾರರು ಇದ್ದರು. ತುಳುನಾಟಕಗಳು ಬದುಕಿನ ಚಿತ್ರಣ ನೀಡಿದೆ ಎಂದರು.
ಹಿರಿಯ ಸಾಹಿತಿ , ನಾಟಕಕಾರ ನೆಕ್ಕಿತಪುಣಿ ಗೋಪಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಮುದ್ದು ಮೂಡುಬೆಳ್ಳೆ ಪ್ರಶಸ್ತಿ ಪುರಸ್ಕೃತರ ಪರಿಚಯ ನೀಡಿ ಅಭಿನಂದಿಸಿದರು.
ಮಾಜಿ ಅಧ್ಯಕ್ಷ ಟಿ. ಶಂಕರ ಸುವರ್ಣ ಪ್ರಸ್ತಾವನೆ ನೀಡಿದರು. ವಿಶುಕುಮಾರ್ ಬದುಕು ಸಾಹಿತ್ಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತೆ ಅನನ್ಯ ಅಗ್ನಿಹೋತ್ರಿ ಭಾಷಣವನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮನಾಥ ಕೆ ಸ್ವಾಗತಿಸಿ,ವಿಶುಕುಮಾರ್ ದತ್ತಿ ನಿ ಸಂಚಲನ ಸಮಿತಿ ಸಂಚಾಲಕ ಕಿಶೋರ್ ಬಿಜೈ ವಂದಿಸಿದರು. ನರೇಂದ್ರ ಕೆರೆಕಾಡು ಮತ್ತು ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.

