ಬಂಟ್ವಾಳ, ಆ. 9: ದೇವಾಲಯಗಳನ್ನು ಕಟ್ಟುವಾಗ ಅನೇಕ ವೃಕ್ಷ ಸಂಪತ್ತು ಹಲವಾರು ಕಾರಣಗಳಿಂದ ನಾಶ ಆಗುತ್ತದೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಮತ್ತು ವೃಕ್ಷ ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ದೇವ ವನ ಎಂಬ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ದೇವಳದ ಜೀರ್ಣೋದ್ಧಾರ ಸಮಿತಿ ಗೌ. ಅಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಅವರು ಆ. 9ರಂದು ಐತಿಹಾಸಿಕ ಮಹತ್ವದ ಗೋಳ್ತಮಜಲು ಗ್ರಾಮ ಶ್ರೀಕ್ಷೇತ್ರ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಂಡಿದ್ದ ದೇವವನ ಅಭಿಯಾನ ಕಾರ್ಯಕ್ರಮಕ್ಕೆ ಕಿರಾಲುಬೋಗಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇಂದು ನೆಡುವ ಮರವು ಮುಂದಿನ ಪೀಳಿಗೆಗೆ ದೇವಸ್ಥಾನದ ಕೆಲಸಗಳಿಗಾಗಿ ಪ್ರಾಪ್ತವಾಗುವುದು. ಪರಿಸರ ಸಂರಕ್ಷಣೆಗಾಗಿ ಉಪಯೋಗ ಆಗುವುದು. ಅಭಿಯಾನದ ಮೂಲಕ ವೃಕ್ಷಗಳನ್ನು ನಿರಂತರ ನೆಡುವುದಲ್ಲದೆ. ಅವುಗಳ ಪೋಷಣೆ,ಸಂರಕ್ಷಣೆ ಮಾಡಬೇಕಾಗಿ ನುಡಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಕುಮಾರ್ ಬರಿಮಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಸದಸ್ಯರುಗಳಾದ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಕೆ.ಪದ್ಮನಾಭ ರೈ, ಗಣೇಶ್ ಶೆಟ್ಟಿ ಗೋಳ್ತಮಜಲು, ಬಟ್ಯಪ್ಪ ಶೆಟ್ಟಿ, ಆಡಳಿತಾಕಾರಿ ಉಮೇಶ ಭಟ್, ಪ್ರಮುಖರಾದ ಬುಡಾ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ರಾಜಶೇಖರ ರೈ, ಸ್ಥಳೀಯರಾದ ರಾಮಚಂದ್ರ ಬನ್ನಿಂತಾಯ, ಡಾ| ವಸಂತ ನಿಟಿಲಾಪುರ, ಬಾಬಣ್ಣ ಗಟ್ಟಿ, ಮಹೇಶ ಗಟ್ಟಿ, ರಮೇಶ ಪೂಜಾರಿ, ಗ್ರಾ.ಪಂ. ಸದಸ್ಯೆ ಪೂರ್ಣಮ ಶ್ರೀಧರ ರಾವ್, ಬಾಳಪ್ಪ ಗೌಡ, ಪದ್ಮನಾಭ ಶೆಟ್ಟಿ, ರಮೇಶ ಯನ್. ಸಹಿತ ಇತರರು ಉಪಸ್ಥಿತರಿದ್ದರು.
