ಬಂಟ್ವಾಳ: ರಿಕ್ಷಾ ಚಾಲಕರು ಪ್ರಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿಕೊಳ್ಳಿ ಎಂದು ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು. ಅವರು ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಿ.ಯಂ.ಎಸ್. ಸಂಯೋಜಿತ ಮತ್ತು ಜನರಲ್ ಮಜ್ದೂರ್ ಸಂಘದ ಘಟಕ ಬಿ.ಸಿರೋಡ್ ಇದರ 27ನೇ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

1 (1)ಸಾರ್ವಜನಿಕ ಸೇವೆಯಲ್ಲಿ ರಿಕ್ಷಾ ಚಾಲಕರ ಸೇವೆಯ ಪಾತ್ರ ಬಲು ದೊಡ್ಡದು, ಉದ್ಯೋಗದಲ್ಲಿ ಕೀಳರಿಮೆ ಬೇಡ ಯಾವುದೇ ಉದ್ಯೋಗದಲ್ಲಿ ಸಾಧನೆ ಮಾಡಿ ತೋರಿಸುವುದೇ ಸಾರ್ಥಕತೆ ಎಂದರು. ಸಂಘದ ತಾತ್ಪರ್ಯ , ಧ್ಯೇಯ ಮತ್ತು ಉದ್ದೇಶಗಳನ್ನು ಅರಿತುಕೊಂಡು ಮುನ್ನಡೆದಾಗ ಸಂಘ ಬಲಿಷ್ಟವಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಯಂ.ಎಸ್‍ನ ಜಿಲ್ಲಾಧ್ಯಕ್ಷರಾದ ಕೆ.ನಾರಾಯಣ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಪಿ.ಜಯರಾಮ ರೈ, ಬಿ.ಎಂ.ಎಸ್.ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರ ಗೌಡ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಗೌಡ ಉಪಸಿತರಿದ್ದರು. ವಸಂತ ಕುಮಾರ್ ಸ್ವಾಗತಿಸಿ ಸದಾನಂದ ವಂದಿಸಿದರು.

By Suddi9

Leave a Reply

Your email address will not be published. Required fields are marked *