ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಸಜಿಪಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ಕಾರ್ಮಿಕ ನಾಸೀರ್ (30)ಎಂಬವರನ್ನು ನಾಲ್ವರ ತಂಡವೊಂದು ರಸ್ತೆ ಕೇಳುವ ನೆಪದಲ್ಲಿ ತಲವಾರಿನಿಂದ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಶಂಕಿತ ಹಲವು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಭಾರೀ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಈ ಪರಿಸರದಲ್ಲಿ ನಡೆದಿರುವ ಹಲ್ಲೆ ಮತ್ತು ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಹಲವಾರು ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಗುರುವಾರ ತಡರಾತ್ರಿ ನಾಸಿರ್ ಆವರು ತನ್ನ ಸ್ನೇಹಿತನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಕೃತ್ಯ ನಡೆದಿದ್ದು, ಇವರನ್ನು ರಕ್ಷಿಸಲು ಬಂದಿದ್ದ ರಿಕ್ಷಾ ಚಾಲಕ ಮುಸ್ತಾಫ ಎಂಬವರಿಗೆ ಗಂಭೀರ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು.
ಐಜಿಪಿ ಅಮೃತ್‍ಪಾಲ್ ಬಂಟ್ವಾಳ ನಗರ ಠಾಣೆಗೆ ಶುಕ್ರವಾರವೇ ಭೇಟಿ ನೀಡಿ ಎಸ್ಪಿ ಡಾ.ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್, ಇನ್ಸ್‍ಪೆಕ್ಟರ್ ಕೆ.ಯು.ನಂಜುಂಡಪ್ಪ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ, ನಗರ, ಪುತ್ತೂರು, ವಿಟ್ಲ, ವೇಣೂರು, ಬೆಳ್ತಂಗಡಿ, ಉಪ್ಪಿನಂಗಡಿ ಎಸೈಗಳನ್ನು ಕರೆಸಿ ತುರ್ತು ಸಭೆ ನಡೆಸಿದ್ದಾರೆ. ಇಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ಕರೆಸಿ ಭಾರೀ ಬಂದೋಬಸ್ತು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *