ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂ. ಕೇಂದ್ರ, ಕುಪ್ಪಿಲ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಲ್ಲಮಜಲು ಶಾಲಾಬಿವೃದ್ಧಿ ಅಧ್ಯಕ್ಷ ರಫೀಕ್, ನಿವೃತ್ತ ಅಂಚೆಪಾಲಕ ಚಿತ್ತರಂಜನ್, ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಅಂ.ಕಾರ್ಯಕರ್ತೆಯರಾದ ಸುಜಾತ, ಸುಲೋಚನಾ ಮತ್ತಿತರರು ಉಪಸ್ಥಿತರಿದ್ದರು.
