ಮೂಡುಬಿದಿರೆ:ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೀನು ವ್ಯಾಪಾರಿ ಸರಕಾರಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಒಂಟಿಕಟ್ಟೆಯಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಒಂಟಿಕಟ್ಟೆಯ ಬೋಜ ದೇವಾಡಿಗ(64)ಎಂದು ತಿಳಿದುಬಂದಿದೆ. ಮೂಡುಬಿದಿರೆ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಿಯಾಗಿದ್ದರು. ಹೊಟ್ಟೆ ನೋವಿಗೆ ಹಲವು ಸಮಯಗಳಿಂದ ಔಷಧಿ ಮಾಡುತ್ತಿದ್ದರು ಗುಣವಾಗದಿದ್ದುದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರೆನ್ನಲಾಗಿದೆ. ಬುಧವಾರ ನಸುಕಿನ ಜಾವ ಎದ್ದು ನಿದ್ದೆ ಬರುವುದಿಲ್ಲ ಎಂದು ಮನೆಯವರಲ್ಲಿ ಹೇಳಿ ಹೊರಬಂದವರು ಹತ್ತಿರದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
