ಮೂಡುಬಿದಿರೆ:ಹೊಸ್ಮಾರು ಬಳಿ ಬುಧವಾರ ರಾತ್ರಿ ದ್ವಿಚಕ್ರವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ರಾಜೇಶ್(29)ಎಂದು ಗುರುತಿಸಲಾಗಿದೆ. ಇವರು ಮೂಲತ: ಗೋಕರ್ಣದವರಾಗಿದ್ದು ನಾಲ್ಕು ವರ್ಷದ ಹಿಂದೆ ಮದುವೆಯಾದ ಬಳಿಕ ಪತ್ನಿ ಜತೆ ಹೊಸ್ಮಾರಿನಲ್ಲಿ ನೆಲೆಸಿರುತ್ತಾರೆ. ಕಾರ್ಕಳ ಬಂಡೀಮಠದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಊರಿಗೆ ಬರುವ ಬಸ್ ಇಲ್ಲದಿದ್ದುದರಿಂದ ಅಂಗಡಿ ಮಾಲೀಕರ ದ್ವಿಚಕ್ರವಾಹನದಲ್ಲಿ ಅವರು ಊರಿಗೆ ಹೊರಟಿದ್ದರು. ನೆಲ್ಲಿಕಾರು ಶಾಲೆ ಬಳಿ ಇವರ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *