ಮೂಡಬಿದ್ರೆ: ಬೆಳುವಾಯಿ ಮಠದ ಕೆರೆ ಎಂಬಲ್ಲಿ ಭಾನುವಾರ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಕಾರ್ಕಳದ ಮಾಜಿ ಪುರಸಭೆ ಸದಸ್ಯ ಸಹಿತ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಸುನೀಲ್ ಸೋನ್ಸ್, ಸೂರಾಜ್ ಕೋಟ್ಯಾನ್, ನಿತೇಶ್ ಅಮೀನ್, ಮೋಹನ್ ಶೆಟ್ಟಿ ಹಾಗೂ ನಿತೇಶ್ ಕೋಟ್ಯಾನ್ ಎಂದು ತಿಳಿದುಬಂದಿದೆ.
ಭಾನುವಾರ ಮಠದ ಕೆರೆ ಬಳಿ ಮೂಡುಮಾರ್ನಡಿನ ಸಂತೋಷ್ ಮತ್ತು ತವೇರಾ ಕಾರಿನಲ್ಲಿದ್ದ ಸುನೀಲ್ ಸೋನ್ಸ್ ತಂಡದ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿತ್ತೆನ್ನಲಾಗಿದೆ. ಕಾರಿನಲ್ಲಿದ್ದ ತಂಡ ಸಂತೋಷ್ಗೆ ಬೂಟು ಕಾಲಿನಿಂದ ತುಳಿದು ಹಲ್ಲೆ ನಡೆಸಿ ಪರಾರಿಯಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಮೂಡುಬಿದಿರೆ ಪೊಲೀಸರು ಆರೋಪಿಗಳನ್ನು ಗುರುತು ಪತ್ತೆ ಮಾಡಿ ಬುಧವಾರ ಬಂಧಿಸಿದ್ದಾರೆ.
