ಮೂಡುಬಿದಿರೆ: ಫಕ್ರುದ್ಧೀನ್ ಇರುವೈಲ್ ಅವರ ನಿರ್ಧಾರ ಕಥೆಯು ಕೇರಳ ಸರಕಾರದ ಶಿಕ್ಷಣ ಇಲಾಖೆಯ ಪ್ರೌಢಶಾಲೆಯ 8 ನೇ ತರಗತಿಯ ಕನ್ನಡ ಭಾಗ 2 ರಲ್ಲಿ ಪಠ್ಯವಾಗಿ ಪ್ರಕಟವಾಗಿದೆ. 2015 ರ ಶೈಕ್ಷಣಿಕ ವರ್ಷದಿಂದ ಸೇರ್ಪಡೆಯಾಗಿದ್ದುಮುಂದಿನ 5 ವರ್ಷಗಳ ತನಕ 8 ನೇ ತರಗತಿಗೆ ಪಠ್ಯವಾಗಿರುತ್ತದೆ. ಈ ಕಥೆಯನ್ನು ಅನಿರೀಕ್ಷಿತ ಕಥಾ ಸಂಕಲನದಿಂದ ಆಯ್ಕೆ ಮಾಡಿದ್ದು ಇದನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಮಿತಿ ಆಯ್ಕೆ ಮಾಡಿದೆ.
fakruddin iruvailಇದುವರೆಗೆ ಇವರ 9 ಕೃತಿಗಳು ಪ್ರಕಟವಾಗಿವೆ. 7 ಕಥಾ ಸಂಕಲನಗಳು ಮತ್ತು 2 ಕಾದಂಬರಿಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. 2001 ರ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಮತ್ತು ಇನ್ನಿತರ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕ್ರತರಾದ ಇವರಿಗೆ 2014 ರ ಆಳ್ವಾಸ್ ನುಡಿಸಿರಿಯಲ್ಲಿ ಬ್ಯಾರಿ ಭಾಷಾ ಬ್ಯಾರಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.

By Suddi9

Leave a Reply

Your email address will not be published. Required fields are marked *