ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ದಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕುಕ್ಕಿಪಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಿತು. ಕುಕ್ಕಿಪಾಡಿ ಗ್ರಾ.ಪಂ.ನಲ್ಲಿ ಒಟ್ಟು 11 ಸ್ಥಾನಗಳಲ್ಲಿ ಬಿ.ಜೆ.ಪಿ 6 ಸ್ಥಾನಗಳನ್ನು ಪಡೆದುಕೊಂಡಿತ್ತು . ಕುಕ್ಕಿಪಾಡಿ ಮತ್ತು ಎಲಿಯನಡುಗೋಡು ಗ್ರಾಮದಲ್ಲಿ ಪರಾಭವಗೊಂಡ ಅಭ್ಯರ್ಥಿಗಳಾದ ಶೇಖರ್ ಶೆಟ್ಟಿ, ವೇದಾವತಿ ಚಂದ್ರಹಾಸ ಪೂಜಾರಿ, ಸಂತೋಷ್ ಬಲ್ಲಾಳ್, ವನಜಾಗಂಗಧರ ಪೂಜಾಇ, ಸುರೇಶ್ ಅಂಚನ್, ಯಶೋಧರ ಗೌಡ ಹಾಗೂ ಸಂಗಬೆಟ್ಟು ಗ್ರಾಮದ ದಿನೇಶ್ ಪೂಜಾರಿ ಅವರ ಮನೆಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ನಾೈಕ್ ಆವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಆಂತರಿಕ ಕಲಹವೇ ಸೋಲಿಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ವೈಯಕ್ತಿಕ ವೈಮನಸ್ಸು ಬಿಟ್ಟು ಪಕ್ಷದ ನಿಷ್ಠೆಯನ್ನು ಕಾಪಾಡಿಕೊಂಡು ಕೆಲಸ ಮಾಡಿ ಎಂದರು. ಪ್ರತಿ ಗ್ರಾಮ ಸಭೆಯಲ್ಲಿ ಭಾಗವಹಿಸಿ, ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿ ಮತ್ತು ಆಡಳಿತದ ಗಮನ ಸೆಳೆಯಿರಿ. ಜನರ ಆಶೋತ್ತರಗಳನ್ನು ಈ ಮೂಲಕ ಈಡೇರಿಸುವ ಕೆಲಸಗಳನ್ನು ಮಾಡಿ, ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಗ್ರಾಮದ ನಾಯಕತ್ವವನ್ನು ವಹಿಸಿಕೊಳ್ಳಿ ಎಂದರು. ಗ್ರಾ.ಪಂ ಚುನಾವಣೆಯಲ್ಲಿ ಪರಾಜಿತರಾಗಿದ್ದೇವೆ ಎನ್ನುವ ಕಾರಣಕ್ಕಾಗಿ ಜನಪರ ಹೋರಾಟಗಳನ್ನು ನಿಲ್ಲಿಸಬೇಡಿ. ಗ್ರಾಮದ ಜನರ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಡಿ ಎಂದು ರಾಜೇಶ್ ನಾಯ್ಕ್ ಪರಾಜಿತ ಅಭ್ಯರ್ಥಿಗಳ ಹುರಿದುಂಬಿಸುವ ಕೆಲಸ ಮಾಡಿದರು.
ದೇವದಾಸ ಶೆಟ್ಟಿ, ಮಹಾಬಲ ಶೆಟ್ಟಿ, ರಾಜೇಶ್, ರತ್ನಕುಮಾರ್ ಚೌಟ, ಸಂಜೀವ ಕರ್ಕೇರ ಮತ್ತು ಪವನ್ ಉಪಸ್ಥಿತರಿದ್ದರು.
