ಬಂಟ್ವಾಳ :ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೆ ಎನ್‍ಎಸ್‍ಎಸ್ ಮತ್ತಿತರ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಅನುಭವ ದೊರೆತಾಗ ಬದುಕಿನಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಎನ್‍ಎಸ್‍ಎಸ್ ಘಟಕ ಸಹಿತ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್ ಮತ್ತಿತರ ವಿದ್ಯಾರ್ಥಿ ಸಂಘಟನೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷ ಯತೀಶ ಶೆಟ್ಟಿ ಚಾಲನೆ ನೀಡಿ ಅವರು ಮಾತನಾಡಿದರು.
1btl-vamadpadavಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಸೈಯದ್ ಗೌಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ, ಘಟಕ ಸಂಚಾಲಕ ಡಾ. ಟಿ.ಕೆ. ಶರತ್ ಕುಮಾರ್, ಯೋಜನಾಧಿಕಾರಿ ಸುರೇಶ್ ವಿಟ್ಲ ಮತ್ತಿತರರು ಶುಭ ಹಾರೈಸಿದರು.
ಯೋಜನಾಧಿಕಾರಿ ಪ್ರೊ.ಶಶಿಕಲಾ, ಉಪನ್ಯಾಸಕ ಕೆ.ಹರಿಪ್ರಸಾದ್ ಶೆಟ್ಟಿ, ಪ್ರೊ.ಕೆ.ಸುಬ್ರಹ್ಮಣ್ಯ ಭಟ್, ಸೌಮ್ಯಾ, ದೀಕ್ಷಿತಾ, ತೇಜಶ್ರೀ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *