ಬಂಟ್ವಾಳ : ಅಗಲಿದ ದಿವ್ಯ ಚೇತನ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.

ಡಾ| ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಮೌನ ಪ್ರಾರ್ಥನೆ ನಡೆಸಲಾಯಿತು. ಬಳಿಕ ಮಾತನಾಡಿದ ಶಾಲಾ ಸಂಚಾಲಕ ಎಂ.ಜನಾರ್ಧನ ಭಟ್ ಅವರು ಡಾ| ಅಬ್ದುಲ್ ಕಲಾಂ ಅವರ ಜೀವನ ಆರ್ದಶಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾರ್ಥಿಸಬೇಕೆಂದು ಕರೆ ನೀಡಿದರು.
ಮುಖ್ಯ ಶಿಕ್ಷಕಿಭಾರತಿ, ಶಿಕ್ಷಕರಾದ ಭೋಜ ಮತ್ತು ರಾಮಕೃಷ್ಣ ಭಟ್ ಅವರು ಡಾ| ಕಲಾಂ ಅವರ ಬಗ್ಗೆ ಮಾತನಾಡಿದರು.
