ಮೂಡುಬಿದರೆ:ಜುಲೈ28: ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ಮಾಜಿ ರಾಷ್ಟಪತಿ ದಿ.ಡಾ. ಎ. ಪಿ. ಜೆ. ಅಬ್ದುಲ್ ಕಲಾಂರವರಿಗೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೌನಾಚರಣೆ ಮೂಲಕ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್, ಪ್ರಾಂಶುಪಾಲ ಸುರೇಶ್ ಬಾಬು ರವರು ಕಲಾಂರವರ ವ್ಯಕ್ತಿತ್ವದ ಸಾಧನೆಗಳ ಕುರಿತು ಮಾತನಾಡಿದರು. ಕಾರ್ಯದರ್ಶಿ ರಶ್ಮಿತಾ, ಆಡಳಿತಾಧಿಕಾರಿ ಡಾ. ಶ್ರುತಕೀರ್ತಿರಾಜ ಉಪಸ್ಥಿತರಿದ್ದರು.
…….

